ಕನ್ನಡ ಸಾಹಿತ್ಯದ ಚರಿತ್ರೆ ೫ ನೆ ಶತಮಾನದಲ್ಲಿ ಕಾಣಬಹುದಾಗಿದೆ.ಆದಿ ಕವಿ ಪಂಪ, ರನ್ನ, ಕುಮಾರವ್ಯಾಸರಿಂದ
ಹಿಡಿದು ರನ್ನ,ದಾಸ ಸಾಹಿತ್ಯ, ವಚನ ಸಾಹಿತ್ಯ , ನಾಟಕ ,ನವೋದಯ, ನವ್ಯ , ಬಂಡಾಯ ಪರಂಪರೆಯಿಂದ ನಡೆದು ಬಂದಿದೆ.
ಸಾಹಿತ್ಯದ ಪರಿಮಳವನ್ನು , ಕಂಪನ್ನು ಪಸರಿಸುವಲ್ಲಿ ನಮ್ಮ ದೃಶ್ಯ ಮಾಧ್ಯಮವಾದ ಚಲನಚಿತ್ರ, ಆಕಾಶವಾಣಿಗಳು ಮುಖ್ಯ ಪಾತ್ರವಹಿಸುತ್ತವೆ.ಅನಕ್ಷರಸ್ತರು.....ಸಾಹಿತ್ಯದ ಅಭಿರುಚಿ ಇಲ್ಲದವರಿಗೂ ಹಾಡುಗಳು ತಲುಪುವುದು ಈ ಸಿನಿಮಾ ರೇಡಿಯೋಗಳಿಂದ ಮಾತ್ರ.ಹೀಗಿರುವಾಗ ಇಂದಿನ ಚಿತ್ರಗಳಲ್ಲಿ ಉತ್ತಮ ಸಾಹಿತ್ಯದ ಜೊತೆಯಲ್ಲಿ ಅಥವಾ ಅದಕಿಂತ ಹೆಚ್ಚು ವೇಗದಲ್ಲಿ ಅಶ್ಲೀಲ ಸಾಹಿತ್ಯ ಬೆಳೆಯುತ್ತಿದೆ.ಹಲವಾರು ಕವಿಗಳ ಹಲವು ಸುಮಧುರ ಹಾಡುಗಳನ್ನು ಕೇಳಬೇಕು.
ಆದರೆ ಎಲ್ಲಿಯ ಮೂಡಲ ಮನೆಯ ಮುತ್ತಿನ ನೀರಿನ.....ಎಲ್ಲಿಯ ಆತಂಕವಾದಿಗಳ ಹೆಸರಲ್ಲಿನಈಗಿನ ಹಾಡುಗಳು.......
ಇವು ಏನು ಪ್ರತಿಪಾದಿಸುತ್ತಿದೆ?
ನಮ್ಮ ಭಾಷೆಯ ಅಭಿಮಾನ,ಕೇವಲ ಘೋಷಣೆಗಳನ್ನು ಕೂಗುವುದರಲ್ಲಿ ಮಾತ್ರವಲ್ಲ....ನಮ್ಮ ಶ್ರೀಮಂತ ಸಾಹಿತ್ಯವನ್ನು ಕಾಪಾಡಿ....ಉತಮ ಅಭಿರುಚಿಯ ಬೆಳವಣಿಗೆ ಕೂಡ ಮುಖ್ಯ ಎಂದು.....ನನ್ನ ಅಭಿಪ್ರಾಯ.....
ಈ ವಿಚಾರದ ಪ್ರಸ್ತಾಪನೆ ನನ್ನ ಬಹುದಿನದ ಬಯಕೆ.ಕ್ಯಾಬ್ನಲ್ಲಿ ವಿವಿಧ ರೀತಿಯ ಕೀಳುಮಟ್ಟದ ಅಭಿರುಚಿಯ ಅಶ್ಲೀಲ ಸಾಹಿತ್ಯದ ಹಾಡುಗಳು ಇದಕ್ಕೆ ಕಾರಣ.
ನಮ್ಮ ಜೊತೆ ಕೂತಿರುವ ಬೇರೆ ಭಾಷೆಯ ಜನರಿಗೆ ಅರ್ಥವಾಗದ ನಮಗೆ ತಿಳಿಯುವ ಈ ಕೆಟ್ಟ ಹಾಡುಗಳನು ಬದಲಾಯಿಸಲು ಹೇಳುವಾಗ....ಇದು ಕೆಟ್ಟ ಹಾಡು ಎಂದು ನಾವು ಅವರಿಗೆ ನೀಡುವ ವಿವರಣೆ....ಯಾವ ಕನ್ನಡ ಸಾಹಿತ್ಯಾಭಿಮನಿಗು..ಬೇಡ.
ಆಗ ನಮ್ಮ ಈ ಭಾಷೆ ನಮ್ಮ ಅಭಿಮಾನವೆಲ್ಲ ಅವರ ಮುಂದೆ ನಮ್ಮನ್ನು ಕುಬ್ಜವಾಗಿಸುತ್ತದೆ.....
ಸಿನಿಮ ಸಾಹಿತ್ಯ ಕೂಡ ಶ್ರೇಷ್ಠ ಉತ್ತಮ ವಾಗಬೇಕು....ಎಂಬ ಅಭಿಲಾಷೆಯೊಂದಿಗೆ.....ಎಲ್ಲರಿಗೂ....
ಕನ್ನಡ ರಾಜ್ಯೋತ್ಸವದ ಶುಭಾಶಯಗಳು.....
ಇಂಪಾಗು ಆಲಿಸುವ ಕಿವಿಗಳಿಗೆ,
ಕನ್ನಡವೆ ಕಂಪಾಗು ಉಲಿಯುವ ನಾಲಿಗೆಯಲಿ...
ಸೊಂಪಾಗು ನುಡಿಯುವ ಪ್ರತಿ ಬಾಯಲ್ಲಿಯು....
ನಿತ್ಯವು ಅರ್ಚಿತವಾಗು..ಆ ಭಗವಂತನಿಗೆ.....
ತಾಯಿ ಕನ್ನಡಾಂಬೆಗೆ......
Sunday, 1 November 2009
Monday, 28 September 2009
ನನಾಸಾಗಲೆಂದು ಬಯಸುವ ಕನಸು
ನಿನ್ನ ಕನಸಿನಿಂದ ನಾ ಬಂದಿದ್ದೆ ದೂರ ಸಾಗಿ....
ಕನಸು ಬರಿ ಕನಸು ಅದು ಚೆನ್ನ ,
ನಿದಿರೆಯಲ್ಲಿ ಕಾಣಲು....ಸವಿ ನಗುವ ಮೂಡಿಸುವುದು
ಅದು ಮರೆಯಗುವುದು ನೋವಿನ ಬುತ್ತಿಯನಿತ್ತು....
ನಿನ್ನ ನೆನಪು ನಿದಿರೆಯನ್ನು ದೂರ ಮಾಡಲು...
ಕನಸು ನಿನ್ನದು ಮಲಗು ಮಲಗೆಂದು ಲಾಲಿ ಹಾಡಿ
ಮತ್ತೆ ನನ್ನನು ನಿನ್ನ ಕನಸ ತೆಕ್ಕೆಗೆ ಸಾಗಿಸಿದೆ
ಮಧುರ ನೆನಪುಗಳ, ಸಿಹಿ ಕನಸುಗಳೀ ಹಾಗೆ
ಕಾಣಲು ಚೆನ್ನ .....ನಿದಿರೆಯಲ್ಲಿ.....
ವಾಸ್ತವದ ಅರಿವಾದಾಗ ನೊವು ಮನದ ತುಂಬ.....
ಹಾಗೆಂದು ಮನ ಕನಸ ಕಾಣುವುದ ಬಿಡುವುದೆ.....
ಗೆಳತಿ....ನಿನಗು ಇರಲಿ ಸವಿ ಗನಸುಗಳ ಬುತ್ತಿ
ಈ ನವರಾತ್ರಿಯ ನವ ನವೀನ ಸ್ಮ್ರಿತಿಯು ನನಪಿಗೆ ಸದಾ
ಬರಲಿ ....ಅವು ನಿಜವಾಗುವುದೆಂಬ ಕನಸು ನಿನ್ನದಾಗಲಿ.........
ಕನಸು ಬರಿ ಕನಸು ಅದು ಚೆನ್ನ ,
ನಿದಿರೆಯಲ್ಲಿ ಕಾಣಲು....ಸವಿ ನಗುವ ಮೂಡಿಸುವುದು
ಅದು ಮರೆಯಗುವುದು ನೋವಿನ ಬುತ್ತಿಯನಿತ್ತು....
ನಿನ್ನ ನೆನಪು ನಿದಿರೆಯನ್ನು ದೂರ ಮಾಡಲು...
ಕನಸು ನಿನ್ನದು ಮಲಗು ಮಲಗೆಂದು ಲಾಲಿ ಹಾಡಿ
ಮತ್ತೆ ನನ್ನನು ನಿನ್ನ ಕನಸ ತೆಕ್ಕೆಗೆ ಸಾಗಿಸಿದೆ
ಮಧುರ ನೆನಪುಗಳ, ಸಿಹಿ ಕನಸುಗಳೀ ಹಾಗೆ
ಕಾಣಲು ಚೆನ್ನ .....ನಿದಿರೆಯಲ್ಲಿ.....
ವಾಸ್ತವದ ಅರಿವಾದಾಗ ನೊವು ಮನದ ತುಂಬ.....
ಹಾಗೆಂದು ಮನ ಕನಸ ಕಾಣುವುದ ಬಿಡುವುದೆ.....
ಗೆಳತಿ....ನಿನಗು ಇರಲಿ ಸವಿ ಗನಸುಗಳ ಬುತ್ತಿ
ಈ ನವರಾತ್ರಿಯ ನವ ನವೀನ ಸ್ಮ್ರಿತಿಯು ನನಪಿಗೆ ಸದಾ
ಬರಲಿ ....ಅವು ನಿಜವಾಗುವುದೆಂಬ ಕನಸು ನಿನ್ನದಾಗಲಿ.........
Monday, 17 August 2009

ಸ್ವಾತಂತ್ರ್ಯದ...ಕಹಳೆ ಮೊಳಗಿ ೬೨ ವರ್ಷವಾಗಿ........ದೇ
ನಾವೀಗ ೬೩ ನೆ ಸಂಭ್ರಮ ದಲ್ಲಿದಿವಿ....
ಆದರೆ ಈ ಸಂಭ್ರಮದ ನಿಜವಾದ ಅರ್ಥ.....ಇನ್ನ
ನಾವೆಲ್ಲ ಹುಡುಕುತ್ತಲೇ ಇದ್ದಿವಿ ಅನ್ನಿಸೊತ್ತೆ....
ಅದೇನೇ ಇರಲಿ ನಮಗೆ ಈ ಸ್ವಚಂದವಾದ ಗಾಳಿ ಉಸಿರಾಡಲು ಅನುವು ಮಡಿ ಕೊಟ್ಟ
ಆ ಧೀರ ಆತ್ಮಗಳಿಗೆ ನಮ್ಮ ನಮನ ....ಅವರ ಕನಸು ಸಾಕರಗೊಳಿಸಲು ಆಗದಿದ್ದರೂ...
ಅವರ ನೆಮ್ಮದಿ ಹಾಳು ಮಾಡದೇ ಇರುವ ಪ್ರಯತ್ನ ಮಾಡುವ .....:)
Saturday, 13 June 2009
ಋತು -.ಭೂಮಿ

ನೀ ಎನಗೆ ನಿಲುಕದ ಕನ್ನಡಿ...ಎಂದು ನಾ ದೂರ ದೂರ ಹೋಗಲು...
ತಿಳಿಯದೇನೋ
ಒಮ್ಮೆ ನೀ ಬಿಸಿಲ ಬೇಗೆಯಂತೆ......ನನ್ನಿಂದ ದೂರ ನಿಲ್ಲಲು...
ನಾ ಮನಸು ಮಾಡಿದ್ದೆ ನಿನ್ನಿಂದ ದೂರ ಸರಿಯಲು.....
..ಮತ್ತೆ ನನ್ನ ಮನಸ್ಸು ನಿನ್ನ ಬಳಿ ಸೇರುತಿದೆ........
ಬರಡು ಭೂಮಿಗೆ ಮಳೆ ಬಂದು, ಹರ್ಷ ತರುವಂತೆ....ಋತುಗಳು ಏಳು ಇರುವಂತೆ...
ನೀ ಹೀಗೆ ಋತುವಿನಂತೆ.....ಬದಲಾಗುತಿರೆ...ನಿನ್ನ
ಮನದಲ್ಲಿ ಇಣುಕಲಿ ಹೀಗೆ ... ನಾನು?
ಈ ಮೌನಕ್ಕೆ...ಈ ಮಾತಿಗೆ ...ಹೆಸರೇನೆಂದು ಹೇಳು .....
ನನ್ನ ಮನಸು ಭೂಮಿಯಲ್ಲ.....ಋತುವಿಗೆ ...ಬದಲಾಗಿ...ತನ್ನ ತಾನು
ಅದು ಮಾರ್ಪಾಡು ಮಾಡಿ ಕೊಳ್ಳುವಂತೆ........
ನೀ ಒಂದೇ ಋತುವಾಗಬೇಕು...... ನನ್ನ ಬಾಳಿಗೆ.....
ನಾ ನಿನ್ನ ಒಂದೇ ಭೂಮಿಯಗಬೇಕೆಂಬ ಬಯಕೆ........
Sunday, 24 May 2009
ಸಿಂಹಳದ ಕ್ರಾಂತಿ
ಈ ಪತ್ರಿಕೆಯಲ್ಲಿ ತಮಿಳು ಸಿಂಹಗಳದೇ ಸುದ್ದಿ......
ತಮಿಳು ಸಿಂಹಗಳ ಸಂಸ್ಥೆಯ ಹುಟ್ಟು, ಬೆಳವಣಿಗೆ ಹಾಗು ಅಂತ್ಯ(ವಾಗಿದ್ದರೆ!!!)ಗಳ, ಸುದ್ದಿ newspaperನಲ್ಲಿ.
ಓದಲು ಅನಿಸಿದ್ದನ್ನು ಇಲ್ಲಿ ಹಂಚಿಕಳ್ಳುವ ಪ್ರಯತ್ನ.ರಕ್ತ್ತಸಿಕ್ತ ಕ್ರಾಂತಿಯ ಅಂತ್ಯ ಕೂಡ ಕೆಂಪಗೆ ಇರುವುದು ಸ್ವಾಭಾವಿಕವಾಗಿಯೇ ಇದೆ. ಅಸಮಾನತೆಗೆ ಪರಿಹಾರ ಯುದ್ಧವಲ್ಲ.ಹೋರಾಟ ಅಸಮಾನತೆಯಾ ವಿರುದ್ಧವಿರಬೇಕೆ ಹೊರತು ಜನಸಾಮನ್ಯರ ವಿರುದ್ಧವಲ್ಲ.
ಇಲ್ಲಿ ನಡೆದದ್ದು ಅದೇ.ಹೋರಾಟವೆನ್ನುವುದಕ್ಕಿಂತ ಅದು ಭಯೋತ್ಪಾದನೆಯಾ ಪ್ರತಿರೂಪವಾಗಿ ತನ್ನ ಮೂಲ ಉದ್ದೇಶವನ್ನು ಮರೆತಿತ್ತ್ತು ಎನ್ನ ಬಹುದೇನೋ.ಅಥವಾ ಇದೆ ಇವರ ಹೋರಾಟದ ಹಾದಿ ಎಂದಾದಲ್ಲಿ ಅದರ ಫಲಿತಾಂಶ ಕಣ್ಣಮುಂದಿದೆ.
ಇತಿಹಾಸ ಸಾಕ್ಷಿಯಾಗಿದೆ ಯಾವ ಕ್ರಾಂತಿ , ಅಮಾಯಕ ಜನರ ಪ್ರಾಣ ವನ್ನು ಬಲಿತೆಗೆದು ಕೊಡಿತೋ ಅವು ಯಾವುವು ಸಫಲವಾಗಲಿಲ್ಲ. ಕ್ರಾಂತಿಯ ಮನೋಭಾವನೆ ಇರುವವರು ಇದನ್ನು ಒಪ್ಪದೇ ಇದ್ದರು ಉದಾಹರಣೆಗಳು ನಮ್ಮನು ಒಪ್ಪಿಸುತವೆ.
ಗಾಂಧಿಯಗಲಿ, ನೆಲ್ಸನ್ ಮಂಡೇಲಾ ಅಗಲಿ....ಈ ಕ್ರಾಂತಿಯಾ ಹಾದಿ ಹಿಡಿದಿದ್ದಾರೆ ನಾವಿಂದು ನೋಡುವ ಪ್ರಪಂಚ ಬೇರೆಯೆದೆ ಆಗಿರುತ್ತಿತು.ಕ್ರಾಂತಿ ವ್ಯವಸ್ಥೆಯನ್ನು ಸರಿಹಾದಿಗೆ ತರುವ , ಸುಧಾರಣೆಯಾ ಮಂತ್ರವಾಗಬೇಕು , ನಮಲ್ಲಿ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಮಾಡಬೇಕೆ ಹೊರತು ಅಶಾಂತಿ , ಹಿಂಸೆಯನ್ನಲ್ಲ.ಎಲ್ಲ ಕ್ರಾಂತಿಗಳು ಇದೆ ರೀತಿ ಇರುತಿದ್ದೆ ಇಂದು ದೇಶಗಳು ಇರುತಿತ್ತೆ ಹರತು ಜನಗಳಲ್ಲ . ಒಂದು ರಾಷ್ಟ್ರದ ನಿರ್ಮಾಣ ತ್ಯಾಗ ಬಲಿದಾನಗಲಿಂದೆ ಹೊರತು ಭಯೋತ್ಪಾದನೆ ಇಂದಲ್ಲ.
ಕ್ರಾಂತಿಯ ಸರಿಯಾದ ಮುಖವನ್ನು ನೋಡಬೇಕೆ ಹೊರತು ಕ್ರಾಂತಿಯನ್ನು ತಿರುಚಿ ಯುವಜನತೆಯನ್ನು ಹಳಿ ತಪ್ಪಿಸುವವೃಂದ ನಾವು jagritraagabeku.ಇಷ್ಟು ವರುಷದ ಕ್ರಾಂತಿ ಇಂದ LTTE ಪಡೆದುಕೊಂಡಿದ್ದ ಕಿಂತ ತನ್ನ skilled ಫಾರ್ಕೆ ಕಳೆದುಕೊಂಡಿದ್ದು ಇತಿಹಾಸ.ಇನ್ನಾದರೂ ನಮ್ಮ ನೆರೆ ರಾಷ್ಟ್ರ ಬಂದೂಕು ಸದ್ದಿನಿಂದ ದೂರವಾಗಿ ಅಭಿವೃದ್ಧಿಯತ್ತ ಹೆಜ್ಜೆ ಹಾಕಲಿ ಎಂದು ಆಶಿಸೋಣ .
ರಾಮಯಣದ ಲಂಕೆಯಂತೆ ನಮ್ಮ ಶ್ರೀಲಂಕ ಕೂಡ ಮತ್ತೆ ಸುವರ್ಣವಾಗಲಿ ಎಂದು ಆಶಿಸೋಣ.ನಮ್ಮ ನೆರೆ ಹೊರೆ ಚೆನ್ನವಾದರೆ ನಾವು ಚೆನ್ನವೇ ಅಲ್ಲವೇ!!!
Saturday, 16 May 2009

ರಾಜಕಾರಣ ತುಂಬಾನೆ ಬಿಸಿ ಆಗಿದೆ .ಚುನಾವಣೆ ಮುಗಿದು...ಫಲಿತಾಂಶ ಹೊರಗೆ ಬಂದಿದೆ.ಗೆಲುವು ಸೋಲುಗಳು
ಆತ್ಮ ವಿಶ್ಲೆಷಣೆಯ ಸಮಯ...(ಇದ್ದರೆ!!!).ಹಾಗೆ ಪ್ರಘ್ಯಾವಂತ ಮತದಾರರು ಕೂಡ ತಮ್ಮ ಹಕ್ಕಿನ ಸದುಪಯೋಗ ನಡೆದಿದೆಯೆ ಎಂದು ಚಿಂತನೆ ಮಾಡಬೇಕಾದ ಸಮಯ.ಆರಿಸಿದ ಪ್ರತಿನಿಧಿಗಳು ತಮ್ಮ ಕಾರ್ಯವನ್ನು ಸಮರ್ಥರಾಗಿ ನಡೆಸುತಿದ್ದಾರೆಂಬ ಬಗ್ಗೆ
ನಮ್ಮ ಪ್ರಜಪ್ರಭುತ್ವದಲ್ಲಿ ಯಾವುದೇ ರೀತಿಯ Aannual rating system/Performance appraisal ಗಳಿಲ್ಲ ದಿರುವುದು ವಿಪರ್ಯಾಸವೇ ಸರಿ.ಈ ನಿಟ್ಟಿನಲ್ಲಿ ನಾವು corporate ವ್ಯವಸ್ತೆಯನ್ನು ಶ್ಲಾಘಿಸಬೇಕು ನೀವೇನು ಹೇಳ್ತಿರ?ಇನ್ನು ಮತ ಚಲಾಯಿಸದೆ, ರಾಜಕಾರಣದ ವ್ಯವಸ್ಥೆಯನ್ನು ದೂಶಿಸುವ ಹಕ್ಕನ್ನು ನೀವು ಕಳೆದುಕೊಂದ್ದಿದಿರ ಎಂದು ಹೇಳಲೆಬೇಕಾಗುತ್ತದೆ .
ಕಮ್ಯೂನಿಸ್ಟ್ ಸರ್ಕಾರದ ಬಿಸಿ ನಿಮಗೆ ತಗುಲಿದ್ದರೆ ಅಥವಾ ೧೯೮೩ ತುರ್ತು ಪರಿಸ್ಥಿತಿಯ ಅರಿವು ನಿಮಗೆ ಇದ್ದಿದರೆ ಪ್ರಜಾಪ್ರಭುತ್ವದ ಮೌಲ್ಯ ನಿಮಗೆ ತಿಳಿವುದು......ನಮ್ಮ ಹಕ್ಕನ್ನು ನಾವು ಯಾವುದೇ ಕಾರಣಕ್ಕೂ.....ಬಿಡಬಾರದು.....
೧ ಸಲ ಮತ ಹಾಕಿ ನಾನೇ ಇಷ್ಟು ಬರೀತಾ ಇದ್ದೀನಿ....ಅಂದ ಮೇಲೆ ಇನ್ನ ನೀವು ಯೋಚಿಸಿ.....
ಸಾವಿರಾರು ಜನ ಪ್ರಾಣತ್ಯಾಗ ಮಾಡಿ ನಮಗೆ ಈ ಸ್ವಾತಂತ್ರ್ಯ ಸಿಕ್ಕಿದೆ...ಈ ಹಕ್ಕು ದೊರಕಿದೆ....
ಮುಂದಿನ ಸಲವಾದರೂ ನಿಮ್ಮ ಹಕ್ಕನ್ನು ಚಲಾಯಿಸಿ........
Friday, 1 May 2009
ಋತು

ಈ ಕಡು ಬಿಸಿಲಿನಲ್ಲಿ ನಿನ್ನ ಹೂ ನಗೆ
ತಂದಿತ್ತೆನ್ನ ಮನಸ್ಸಿಗೆ ವಸಂತ,
ನಿನ್ನ ಒಂದು ಸಿಹಿ ಮಾತು ಆಯಿತೆನ್ನ
ಜೀವಕೆ ಜೇನನಿನ ಸವಿ ಗಂಪು
ನಿನ್ನ ಮೌನ ವೆನಗೆ ಶಿಶಿರ ನಿನ್ನ ಮಾತೆನೆಗೆ ವರ್ಷ
ಋತು ಋತುವೆನಗೆ ನಿನ್ನ ನೂರು ಭಾವಗಳು
ಸಹಿಸಲಾರೆ ನಾ ಬರವನ್ನು ಯಾವ ಋತುರುತುವಿನಲ್ಲು
ನೀ ಸದಾ ಇರಬೇಕು ಮಲೆನಾಡ ನಿತ್ಯ ವರ್ಷ ದಂತೆ
ಪ್ರೀತಿಯ ಮಳೆ ಸುರಿಸುತ......ಯಾರ ಮೇಲೆ ಎಂಬ ಪ್ರಶ್ನೆ ಗೆ ಉತ್ತರ
ನಾ ನಿನ್ನು ಹುಡುಕುತಿರುವೆ ಗೆಳಯ......
ಆದರೇನು.......ಬಯಕೆ ಒಂದೇ...
ಆ ಮಳೆಯ ಸ್ವೀಕರಿಸುವ ಭೂಮಿ , ನಿನ್ನ ಗೆಳತಿ ನಾನಾ ಆಗಬೇಕೆಂದು......
ತಂದಿತ್ತೆನ್ನ ಮನಸ್ಸಿಗೆ ವಸಂತ,
ನಿನ್ನ ಒಂದು ಸಿಹಿ ಮಾತು ಆಯಿತೆನ್ನ
ಜೀವಕೆ ಜೇನನಿನ ಸವಿ ಗಂಪು
ನಿನ್ನ ಮೌನ ವೆನಗೆ ಶಿಶಿರ ನಿನ್ನ ಮಾತೆನೆಗೆ ವರ್ಷ
ಋತು ಋತುವೆನಗೆ ನಿನ್ನ ನೂರು ಭಾವಗಳು
ಸಹಿಸಲಾರೆ ನಾ ಬರವನ್ನು ಯಾವ ಋತುರುತುವಿನಲ್ಲು
ನೀ ಸದಾ ಇರಬೇಕು ಮಲೆನಾಡ ನಿತ್ಯ ವರ್ಷ ದಂತೆ
ಪ್ರೀತಿಯ ಮಳೆ ಸುರಿಸುತ......ಯಾರ ಮೇಲೆ ಎಂಬ ಪ್ರಶ್ನೆ ಗೆ ಉತ್ತರ
ನಾ ನಿನ್ನು ಹುಡುಕುತಿರುವೆ ಗೆಳಯ......
ಆದರೇನು.......ಬಯಕೆ ಒಂದೇ...
ಆ ಮಳೆಯ ಸ್ವೀಕರಿಸುವ ಭೂಮಿ , ನಿನ್ನ ಗೆಳತಿ ನಾನಾ ಆಗಬೇಕೆಂದು......
Subscribe to:
Comments (Atom)
