Saturday 9 October 2010

ವಿವಾದಗಳ ಕೆಸರಿನ ಸುಳಿಯಲ್ಲಿ ಭಾರತ

ಪ್ರಪಂಚದ ಭೂಪಟದಲ್ಲಿ ಭಾರತ ಇನ್ನು ಬೆಳೆಯುತ್ತಿರುವ ದೇಶ.ನಾವು ಪ್ರಗತಿ ಪಥದಲ್ಲಿ ಇನ್ನು ನಡೆಯುತಲೇ ಇದ್ದೇವೆ, 1947ರಿಂದ.
ನಮ್ಮ ಜನತೆ ಎಲ್ಲ ಕ್ಷೇತ್ರದಲ್ಲಿ ಮುಂದೆ ನುಗ್ಗಿ , ಹೊರಾಡಿ ಗೆಲುವನ್ನು ಸಾಧಿಸುವ ಯತ್ನದಲ್ಲಿ ನಡೆಯುತಿದ್ದಾರೆ.ನಮ್ಮ ದೇಶವನ್ನು ಭೂಪಟದಲ್ಲಿ ಮೆರೆಸಲು
ನಾವು ಏನೆಲ್ಲ ಪಯತ್ನ ಮಾಡುತಿರುವಾಗ, ನಮ್ಮ ರಾಜಕರಣಿಗಳು ದೇಶದ ಮಾನಪಹರಣದ ಯಾವುದೆ ಅವಕಾಶವನ್ನು ಬಿಡುವಂತೆ ಕಾಣುತ್ತಿಲ್ಲ.
commonwealth ಎಂಬ ಅವಕಾಶವನ್ನು ನಮ್ಮ ರಾಜಕಾರಣಿಗಳು ಯಾವ ರೀತಿ ಉಪಯೊಗಿಸಿಕೊಂಡಿದ್ದಾರೆ ಎಂಬುದನ್ನು ಜಗತ್ತಿಗೇ ಗೊತಾಗಿದೆ.
ಒಬ್ಬರ ಮೇಲೆ ಒಬ್ಬರು ಕೆಸರು ಎರಚುವಲ್ಲಿ ನಿರತರಾಗಿದ್ದರೆ ಹೊರತು ನಡೆದಿರುವ ಗೊಂದಲವನ್ನು ಸರಿಪಡಿಸಲು ದೇಶದ ಪ್ರಧಾನಿ, ಅದು ಮಾಧ್ಯಮಗಳ ಹಾರಾಟ, ಹೊರಾಟದ ನಂತರ ತಲೆ ತೂರಿಸುವಂತಾಗಿದ್ದು ವಿಷಾದದ ಸಂಗತಿ.ದಕ್ಶಿಣ ಆಫ್ರಿಕಾದಂತಹ ದೇಶದಿಂದ ನಾವು ಬುದ್ಧಿವಾದ ಹೇಳಿಸುಕೊಳ್ಳುವ ಹಾಗೆ ಆಯಿತು.ಮಾಧ್ಯಮಗಳು ದಿಲ್ಲಿ ಬದ್ನಾಮ್ ಹುಯಿ ಕಾಮನ್ವೆಲ್ಥ್ ತೆರೆ ಲಿಯೆ ಎಂದು ಹಾಡಿ ಕುಣಿದವು.ಮಾನ್ಯ ಕಲ್ಮಾಡಿ ಸಾಹೇಬರು ನಮ್ಮ ಮಾಜಿ ರಾಷ್ತ್ರಪತಿಗಳನ್ನು ಬಿಡದೆ,ಸತ್ತ ರಾಜಕುಮಾರಿಯನ್ನ್ನೂಜೀವಂತಗೊಳಿಸಿದ ಧೀಮಂತ ವ್ಯಕ್ತಿ.

ಪಾಪ ಈಗ ಗಾಂಧೀ ತಾನು ಈ ಕರ್ಮ ಕಾಂಡ ನೊಡೋದರ ಬದಲು ಆಗ ಪ್ರಾಣ ಬಿಟ್ಟಿದ್ದೆ ಒಳ್ಳೇದು ಅಂತಾ ಅಂದುಕೊಳ್ತಾ ಇದ್ರು......

ಈ ರಾಜಕಾರಣಿಗಳು,ಮಾಧ್ಯಮಗಳು,ನಾವು.....ಇವರಲ್ಲಿ ಯಾರು ಸತ್ಪ್ರಜೆಗಳು?

ಹೇಗೊ ಈ ವಿವಾದಗಳ ನಡುವೆ ಭಾರತ ಈ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದರೆ ಅದು ಕೆಸರಿನಲ್ಲಿ ಕಮಲದಂತೆ.......ಸಮಾಧಾನದ ಸಂಗತಿಯಗುತ್ತದೆ.........