Monday 27 October 2008

ಮನದಾಳದಿಂದ

ಮತ್ತೆ ದೀಪಾವಳಿ ಬಂದಿದೆ, ಬೆಲೆಏರಿಕೆಯಾ ಕಾಲದಲ್ಲಿ ಹಬ್ಬ ಹೇಗಪ್ಪಮಾಡೋದು ಅಂತ ಕೆಲವರಿಗೆ ಯೋಚನೆ ಆದ್ರೆ ಇನ್ ಕೆಲವರಿಗೆ ಎಷ್ಟು ಚಿನ್ನ ತೊಗೊಳ್ಳೋದು ಈ ಸಾರಿ ಅಂತ ಚಿಂತೆ ಹೀಗೆ ಅವರವರಿಗೆ ಅವರದೇ ಆದ ಚಿಂತೆ.........
ಆದ್ರೆ ಬೆಲೆ ಬಗ್ಗೆ ಚಿಂತೆ ಮಾಡ್ತಾ ಮಾಡ್ತಾ ನಾವು ಇನ್ನು ಹೆಚ್ಚು ಖರ್ಚು ಮಾಡ್ತಾ ಇದ್ದಿವೇನೋ ಅನ್ಕೊಂತೀನಿ
ಹಾಗೇನೇ, ಆ ದೀಪ ದ ಬೆಳಕು..ಪಟಾಕಿ ಸಂಭ್ರಮ ಎಲ್ಲಾನು ಮರೀತಾಇದ್ದಿವಿ....
ಸ್ನೇಹಿತೆ ಹೀಗೆ ಯಾರದೋ ಮನೆ ಮುಂದೆ ಹೊಡೆದು ಬಿಟ್ಟಿರೋ ಪಟಾಕಿ ಕಸ ತಂದು ಅವರ ಮನೆ ಮುಂದೆ ಹಾಕಿ
ತಾವೇ ಅಷ್ಟೂ ಹೊಡೆದ್ದಿದು ಅಂತ ಜಂಬ ಮಾಡ್ತಾ ಇದರಂತೆ......

ಅದೇ dhaatiyalli ಈ ಕವಿತೆ .......

ಬೆಳಕು
ಚಂದ್ರ ನಿನ್ನ ಬೆಳಕನ್ನು ಮುಚ್ಚಿ ಬೆಳಗಿದೆ
ಹಣತೆಯ ಪ್ರಭೆ ಪಸರಿಸಿದೆ ಊರೆಲ್ಲ
ಕತ್ತಲು ಕವಿದ ಈ ಭುವಿಗೆ ಇನ್ನೊಂದು
ಆಶಾಕಿರಣ ........
ಹಾ ಹಾ ನೀ ಹೀಗೆ ಅಸೂಯೆಪಡಬೇಡ ಶಶಾಂಕ...
ದಿಗಿಲು ಬೇಡ ನನ್ನ ಚಂದ್ರಮ ಇದೆಲ್ಲ ಕೇವಲ ರಾಮ, ಬಲಿಯರ
ಲಕ್ಷ್ಮಿ ದೇವಿಯರ ಸ್ವಾಗತಕ್ಕೆ ಮಾತ್ರ...........
ದೀಪಾವಳಿಯ ೩ ದಿನಗಳಿಗೆ ಮಾತ್ರ........
ನೀನೆ ಎಂದು ನಮ್ಮೆಲ್ಲರ ಬಾಳಿಗೆ ನಿರಂತರ ದೀವಿಗೆ.......
ಈ ಸತ್ಯ , ಪ್ರಕೃತಿ ನಿನಗೆ ನೀಡಿದ ವರ ಮಾತ್ರ
ಹಾಗೆಂದು ನೀ ಕೂಡ ಹಿಗ್ಗ ಬೇಡ
ಇನ್ನೊಂದು ಸತ್ಯ ವ ಮೊದಲು ನೀ ಅರಿಯಲೇಬೇಕು.....ನೀ
ಕೂಡ ಕಣ್ಮರೆ ಯಾಗುವೆ ಗ್ರಹಣದ ದಿನದಂದು....
ಅದ್ದರಿಂದ ಚಂದ್ರ, ಸೂರ್ಯ , ಹಣತೆ ಎಲ್ಲ ವೂ
ಪಂಜು , ಲಾತಿನು , ವಿದ್ಯುತ್ ದೀಪ
ಎಲ್ಲ ಆ ದೇವನ ವಿಧ ವಿಧದ ಬೆಳಕಿನ ಪ್ರತಿರೂಪಗಳು......
ಬಾ ಈ ದೀಪಾವಳಿಗೆ, ದೀಪ ದ ಹಲವು ಪ್ರತಿರೂಪದ ಆ ಮಂಗಳ ಮೂರುತಿಗೆ
ಬಾಗಿ ನಮಿಸಿ ಕರ ಜೋಡಿಸಿ ನಮಿಸುವ.........

ದೀಪಾವಳಿಯ ಹಾರ್ದಿಕ ಶುಭಾಶಯಗಳು......
















Sunday 19 October 2008

ಪ್ರಥಮ ಬ್ಲಾಗ್ ಪೋಸ್ಟಿಂಗ್ , ಸ್ವಲ್ಪ ಹಾಗೆ ಹೀಗೆ ಇದ್ರೆ ಅಡ್ಜಸ್ಟ್ maadkoli ಅಂತ ಸಣ್ಣ request.
ತುಂಬಾ ದಿನಗಳಿಂದ ಕವನ ರಚಿಸುವ .....ಹವ್ಯಾಸ ಇದೆ ಆದ್ರೆ SHARE ಮಾಡೇ ಇಲ್ಲ.....
ಇಲ್ಲೊಂದು ಪ್ರಸ್ತುತ ಇದೆ.......
ಪಯಣ

ಬಾಳ ಹಾದಿ ಹೀಗೆ,
ನದೆವ ದಾರಿಯೆಲ್ಲ ಹೂವಲ್ಲ,
ಅದರೆ ನಡೆವುದು ನಿಲ್ಲ್ಲಲ್ಲ
ಹೂವನ್ನು ಅರಸಿ ...ಮುಳ್ಳಿನ ಹಾದಿ ಕ್ರಮಿಸಿ
ಕೊನೆಗೊಂದು ದಿನ ಕಂಡೆ ಪಾರಿಜಾತ ವನವನ್ನು.....
ಆದರೇನು.....ಪಾರಿಜಾತದ ಪಯಣ ಕೂಡ ಒಂದೇ ದಿನ........
too difficult to ಟೈಪ್
in ಕನ್ನಡ....hope i will learn soon.....
ಸೂಚನೆಗಳೂ ಸ್ವಾಗತಾರ್ಹ...........