Sunday 11 July 2010

ನಮ್ಮ ಮನೆಯಲ್ಲಿ ಅರಳಿದ ಬ್ರಹ್ಮಕಮಲ






ಅವರಿವರ ಮನೆಯಲ್ಲಿ ಅರಳಿದ ಬ್ರಹ್ಮಕಮಲವನ್ನು ನೋಡಿ ನಾನು ನನ್ನ ಅಮ್ಮ ಒಂದು ಬ್ರಹ್ಮ ಕಮಲದ ಎಲೆಯನ್ನು ತಂದು ಚಿಕ್ಕದೊಂದು ಪಾಟ್ನಲ್ಲಿ ನೆಟ್ಟಿದೆವು.
ಅದು ಮೂರು ನಾಲ್ಕು ವರ್ಶದಿನ್ದ ಬೆಲಿತಾನೆ ಇತ್ತು.ಕೊನೆಗು ಒಂದು ಮೊಗ್ಗು ಬಿಟ್ತು ಅಮ್ಮ ತುಂಬ excite ಆಗಿದ್ಲು.ಅದಿಕ್ಕೆ ಅದನ್ನ ಮಂಗಗಳ ಕ್ಯ್ಗಳಿಂದ ಕಾಪಾಡಲು ಪ್ರತಿ ದಿನ ಅ ಕುಂಡವನ್ನ್ನು ಕೊತಿ ಬಂದಾಗ ಒಳಗೆ ಇಡೋದು, ಮತ್ತೆ ಹೊರಗೆ ಇಡೊದು ಆಗ್ತ ಇತ್ತು.ಆದ್ರೆ ಏನೊ ಅ ಮೊಗ್ಗು ಹೆಚ್ಚು ಬೆಳೆಯುವ ಮೊದಲೆ ಮುದುಡಿ ಹೊಯಿತು, ಅಮ್ಮನ ನಿರಾಸೆ ಬಗ್ಗೆ ಇನ್ನು ಹೆಳೋದೆ ಬೇಡ.

ಅದರೆ phoenix ತರ ಮತ್ತೆ ವಾರದಲ್ಲಿ ಇನ್ನೊಂದು ಮೂಗ್ಗು ಬಿಟ್ಟು ಅಮ್ಮನ ಮುಖದಲ್ಲಿ ಮಂದಹಾಸ ಮೊಡಿತ್ತು.ಈ ಸಾರಿ ಏನು extra care ತೆಗೆದು ಕೊಳ್ಳದೆ ಪ್ರಕೄತಿಯ ಮಡಿಲೆಗೇ ಅದನು ಹಾಕಿದ್ದೆವು.ಪ್ರಕೃತಿ ನಮ್ಮ ಮನೆಯಲ್ಲಿ ಮೊದಲ ಹೊವನ್ನು ಅರಳಿಸಿತ್ತು.ಅಮ್ಮನೆ ಉತ್ಸಾಹಾದಲ್ಲಿ ನಾನು ಮಧ್ಯ ರಾತ್ರಿ ಮನೆಗೆ ಬರುವದರಲ್ಲಿ photo ಸಹ ತೆಗೆದಿದ್ದಳು.ಮತ್ತೆ ನಾನು ಬಂದಾಗ ಅದು ಪೂರ್ತಿಯಾಗಿ ಅರಳಿತ್ತು.
ರಾತ್ರಿ ಅರಳಿ ಮತ್ತೆ ಬೆಳಗ್ಗೆಯ ಹೊತ್ತಿಗೆ ಪ್ರಕೄತಿಯಲ್ಲೇ ಲೀನವಾಗಿ ಹೊಗುವ ಈ ಹೂವು ಅಲ್ಪಾಯುಶಿ.ಅದರೆ ಕೆಲವೇ ಗಂಟೆಗಳಲ್ಲಿ ಇದು ಕೊಡುವ ಆನಂದ ಅಪಾರ.

ಅದರ ಮಾಹಿತಿ ಮತ್ತು ಚಿತ್ರ ಇಲ್ಲಿದೆ:
ಸಸ್ಯ ಶಾಸ್ತ್ರ ಹೆಸರು:Saussurea obvallata

No comments: