Sunday, 31 January 2010
ಭಾರತ ಮತ್ತು ಗ್ರಾಹಕ ಜಗತ್ತು
ಗಾಂಧೀಜಿಯವರ ತತ್ವಗಳನ್ನು ನಾವು ಪಾಲಿಸದೆ ಇದ್ದರು , ಅವರ ಚಿತ್ರಪಟವನ್ನು ನೇತು ಹಾಕುವುದರಲ್ಲಿ ನಾವು ಹಿಂದೆ ಬಿದ್ದಿಲ್ಲ.
ಇಂತಹುದೇ ಒಂದು ಅವರ ಗ್ರಾಹಕ್ರ ಬಗೆಗಿನ ಮಾತು.
"A customer is the most important visitor on our premises.
He is not dependent on us. We are dependent on him.
He is not an interruption in our work – he is the purpose of it.
We are not doing him a favour by serving him. He is doing us a favour by giving us the opportunity to serve him.
- Mahatma Gandhi
ಇನೋಬ್ಬರ ನುಡಿಮುತನ್ನು ಅನುವಾದ ಮಾಡಲು, ಸರಿ ಹೊಂದದೆ ಈ ಮೇಲಿನ ಸಾಲುಗಳನ್ನು ಹಾಗೆಯೆ ಬಿಟ್ಟಿದೇನೆ.
ಗಾಂಧೀಜಿಯವರ ಅಭಿಮಾನಿಯಲ್ಲದಿದ್ದರು, ಸರಿಯಾದ ವಿಚಾರಧಾರೆಯನ್ನು ಗೌರವಿಸುವುದು ತಪ್ಪಲ್ಲ.
ಯಾಕೆ ಹೀಗೆ ಗ್ರಾಹಕ ಹಾಗು ಸೇವಾ ಜಗತ್ತಿನ ಬಗ್ಗೆ ಈ ಧಿಡೀರನೆ ಯೊಚನಾ ಲಹರಿ.....
ನಾನು ಕೆಲವು ಸನ್ನಿವೇಶಗಳಲ್ಲಿ ಗ್ರಾಹಕಿಯಾಗಿ ಅನುಭವವಾದ ಮೇಲೆ ಇದನ್ನು ಬ್ಲಾಗಿನಲ್ಲಿ ಹಾಕಬೇಕೆಂಬ...ಅನಿಸಿಕೆ ಮೂಡಿದ್ದು
ನಗರದ ನೇತ್ರಾಲಯಕ್ಕೆ ಹೋಗಿದಾಗ ಕಾದು ಕಾದು , receptionistನ್ನು ಕೇಳಲು
ಇಷ್ತ ಇದ್ದರೆ ಕಾಯಿರಿ ಇಲ್ಲವಾದಲ್ಲಿ ಹೋಗಿ ಎಂಬ ಉತ್ತರ ಪಡೆಯಬೇಕಾಯಿತು....
ಇನ್ನು ಬಸ್ಸಿನಲ್ಲಿ ವಿದ್ಯಾರಣ್ಯಪುರಕ್ಕೆ ಹೋಗುತ್ತಿರುವಾಗ TATA Institute ಬಳಿ ಹುಡುಗಿಯೊಬ್ಬಳು
ರಾಜಾಜಿನಗರ ಹೊಗುವುದಾ ಎಂದು ಕೇಳಿದ್ದು ನಮ್ಮ driver ಅಣ್ನನಿಗೆ ಬಲು ಕೋಪ ಬಂದು
ಆ ಹುಡುಗಿಗೆ ಬಯ್ಗುಳವಾಯಿತು.ಎರಡನೆ ಸನ್ನಿವೇಶದಲ್ಲಿ ನಾನು ಏನು ಮಾಡಲು ತೋಚಲಿಲ್ಲವದರು, ಮೊದಲನೇ ಪರಿಸ್ಥಿತಿಯಲ್ಲಿ
ನಾನು ವೈದರಿಗೆ ದೊರು ನೀಡಲು ಮಾತ್ರ ಸಾಧ್ಯವಯಿತು.ಇದರಲ್ಲಿ ವೈದ್ಯರು ಯಾವ ಪಾತ್ರ ?ಅವರ receptionist ಹಾಗೆ
ನಡೆದುಕೊಂದಿದ್ದು ಸ್ವ ಇಚ್ಚೆಯಿಂದಲೊ ಅಥವಾ ವೈದ್ಯರ ನಿರ್ದೇಶನದ ಮೆರೆಗೋ ಗೊತ್ತಿಲ್ಲ.ಇದು ಸಾಮನ್ಯವಾಗಿ ನಾನು ಆಸ್ಪತ್ರೆಗಳ್ಲಲ್ಲಿ
ಕಾಣುವ,ನೋಡುವ ಅನುಭವ.ವೈದ್ಯರ ಸಮಯ ಮಾತ್ರವೇ ಮುಖ್ಯವೇ?ರೋಗಿಯ ಸಮಯ ಸಮಯವಲ್ಲವೆ?ಅಥವಾ ವೈದ್ಯರು ಮಾತ್ರ
ಆ privleged communityಯವರೋ ಗೊತ್ತಿಲ್ಲ.ಆದರೆ ಇಂದು ಭಾರತ ಸೇವಾವಲಯದಲ್ಲಿ ಮಾಡುತ್ತಿರುವ ಸಾಧನೆಯಲ್ಲ್ಲಿ ವಿದೇಶಿ
ಗ್ರಾಹಕರಲ್ಲದೆ ನಮ್ಮ ದೇಶಿ ಗ್ರಾಹಕರಿಗೂ ಅಷ್ಟೇ ಮಹತ್ವ ನೀಡಿದರೆ ನಮ್ಮ ಗ್ರಾಹಕ ಸೇವೆ BPO, call center, MNCಗಳಿಗೆ
ಸೀಮಿತವಾಗದೆ...ಪ್ರತಿಯೊಂದು ಪರಿಧಿಯಲ್ಲು ನಾವು ಉತ್ತಮ ಸೇವಾ ವಿತರಕರಾಗುವುದರಲ್ಲಿ ಆಶ್ಚರ್ಯವಿಲ್ಲ.
ಗ್ರಾಹಕ ರೋಗಿಯಾಗಿರಬಹುದು, ಬಸ್ಸಿನಲ್ಲಿ ಒಡಾಡುವ ನಾವು ನೀವಾಗಿರಬಹುದು...ಅಥವಾ ಸಪ್ತ ಸಮುದ್ರದಾಚೆಯಿರುವ ನಮ್ಮ clients ಇರಬಹುದು.ಎಲ್ಲರು ಗ್ರಾಹಕರೇ, ಜಗತ್ತು ಒಂದು ವ್ಯಾಪಾರ ರಂಗವೇ....
Subscribe to:
Post Comments (Atom)
1 comment:
Hmm looks like you had couple of bad experiences off late... :)
Post a Comment