Sunday, 27 December 2009

ಮರೆಯಾಗದ ಮುಖ

ಕಳೆದು ಹೋದ ವರುಷದಲ್ಲಿ
ನೂರು ಮುಖಗಳ ಪರಿಚಯ.....
ಅವರೆಲ್ಲ ಆಗಲಿಲ್ಲ ಈ ಹೃದಯದಲ್ಲಿ ಸಂಚಯ...


ಕೆಲವು ಮುಖಗಳ ಮತ್ತ್ ಕಾಣಬಾರದೆಂಬ....
ಮತ್ತೆ ಹಲವು ಸ್ಮ್ರಿತಿಯಲ್ಲಿ ಮೂಡಿ ಮರೆಯಾಗಿದೆ....
ಇನ್ನು ಹಲವು ಕಾಣಬೇಕೆಂದರು....
ಕಾಣದ ,ಕಣ್ಣಿನಿಂದ ದೂರವಾದ ಮುಖಗಳು

ಹೀಗೆ ಹಲವರು ದೂರವಾದವರು
ಹೃದಯದಿಂದ ಮರೆಯಾಗಲಾರರು....

ಈ ನಡುವೆ ಒಂದು ಮುಖ ಮತ್ತೆ ಮತ್ತೆ
ಮನದಲ್ಲಿ ಮೂಡಿ ಹೃದಯದಲ್ಲಿ ನಿಂತು ಬಿಟ್ಟಿತು
ಅಳಿಸಿ ಹಾಕುವಂತಹುದಲ್ಲ ಅ ಮೊಗ

ದಿನವು ಕಾಣ ಸಿಗುವಂತಹುದಲ್ಲ
ನೂರು ಚಂದಿರನ ಒಟ್ಟು ಸೇರಿಸಿದಂತೆ
ತಾರೆಗಳು ನಗು ಚೆಲ್ಲಿದಂತೆ....

ಬಣ್ಣಿಸಲು ಬಾರದಂತಹ ಆ ವದನದ
ಬಿಂಬವ ಬಚ್ಹಿಟ್ಟು, ಈ ಕಣ್ಣುಗಳಲ್ಲಿ
ಹೇಳುತಿರುವೆ ವಿದಾಯ ಆ ವರುಷಕೆ...

ವರುಷಗಳರುಳಿದರು ಮರೆಯಾಗದ ಆ ಮುಖದ ನೆನಪಿನಲ್ಲಿ......

No comments: