ನಿನ್ನ ದನಿ
ನಿನ್ನ ದನಿ ಒಮ್ಮೆ ಕಿವಿಯಲ್ಲಿ ಬಿದ್ದಾಗ
ಉದರದಲ್ಲಿ ನೂರು ಚಿಟ್ಟೆ ಹಾರಿದಂತಾಗಿ.....
ಆ ಭಾವನೆಯ ಎಲ್ಲಿ ಬಿಚ್ಹಿ ಇಡಲಿ....
ಆ ದನಿ ಇನ್ನು ನನ್ನ ಕಿವಿಯಲ್ಲಿ ಗುಯ್ ಗುಡುತ್ತಿದೆ....
ಹೃದಯದಲ್ಲಿ ನೂರು ತಂತಿ ಒಮ್ಮೆ ಮೀಟಿ....
ನನ್ನ ಎದೆಯಲ್ಲಿ ನೂರು ವೀಣೆ ಹಾಡಿದಂತೆ...
ಪ್ರತಿಯೊಂದು ಬಡಿತವು ನಿನ್ನ ಹೆಸರನ್ನೆ ಜಪಿಸುತಿದೆ...
ಒಮ್ಮೆ ನಿನಗೆ ಕೇಳಿದರು ಸಾಕು...
ಸಾರ್ಥಕ ಈ ಹೃದಯ ಬಡಿಯುವುದಕ್ಕು....
ಬಣ್ಣಿಸಲು ಸಾಧ್ಯವಿಲ್ಲ ಆ ಭಾವನೆಗಳನ್ನು,
ಬರೆದಿಡಬಹುದೇ ಪ್ರತಿ ಮಿಡಿತವನ್ನು
ಕಣ್ನಿಗೆ ಕಾಣಿಸದ್ದು...ಬಣ್ಣನಗೆ ಮೀರಿದ್ದು
ನೀ ಮಾತ್ರ ತಿಳಿಯಬಲ್ಲೆ......ಅನುದಿನವು ನಿನ್ನ
ನೆನ್ನೆಯುವ ಈ ಜೀವವನ್ನು.....
Subscribe to:
Post Comments (Atom)
No comments:
Post a Comment