Friday, 1 May 2009

ಋತು


ಈ ಕಡು ಬಿಸಿಲಿನಲ್ಲಿ ನಿನ್ನ ಹೂ ನಗೆ
ತಂದಿತ್ತೆನ್ನ ಮನಸ್ಸಿಗೆ ವಸಂತ,
ನಿನ್ನ ಒಂದು ಸಿಹಿ ಮಾತು ಆಯಿತೆನ್ನ
ಜೀವಕೆ ಜೇನನಿನ ಸವಿ ಗಂಪು
ನಿನ್ನ ಮೌನ ವೆನಗೆ ಶಿಶಿರ ನಿನ್ನ ಮಾತೆನೆಗೆ ವರ್ಷ
ಋತು ಋತುವೆನಗೆ ನಿನ್ನ ನೂರು ಭಾವಗಳು
ಸಹಿಸಲಾರೆ ನಾ ಬರವನ್ನು ಯಾವ ಋತುರುತುವಿನಲ್ಲು
ನೀ ಸದಾ ಇರಬೇಕು ಮಲೆನಾಡ ನಿತ್ಯ ವರ್ಷ ದಂತೆ
ಪ್ರೀತಿಯ ಮಳೆ ಸುರಿಸುತ......ಯಾರ ಮೇಲೆ ಎಂಬ ಪ್ರಶ್ನೆ ಗೆ ಉತ್ತರ
ನಾ ನಿನ್ನು ಹುಡುಕುತಿರುವೆ ಗೆಳಯ......
ಆದರೇನು.......ಬಯಕೆ ಒಂದೇ...
ಆ ಮಳೆಯ ಸ್ವೀಕರಿಸುವ ಭೂಮಿ , ನಿನ್ನ ಗೆಳತಿ ನಾನಾ ಆಗಬೇಕೆಂದು......












Saturday, 25 April 2009

ನಾವೀಗ 21ಶತಮಾನದಲ್ಲಿ ನಡೀತಾ ಹುಂ ಅಲ್ಲ ಓಡ್ತ ಇದೀವಿ ಅಂತ ಹೆಳ್ಬಹುದು.
ಆದರು ಕೆಲವು ಅಯಾಮಗಳು ಮಾತ್ರ ಹಾಗೆ ಇದೆ.
ಈಗಲು ಸ್ತ್ರೀ ಸ್ವಾತಂತ್ರ್ಯ ಬರೀ ಭಾಶಣಗಳಲ್ಲಿ, ಪುಸ್ತಕಗಳಲ್ಲಿ ಮಾತ್ರ್.....
ಹೆಣ್ಣು ಈಗಲು ಹತ್ತವರಿಗ್ ಒಂದು liability.

ಜಾತಿ ಕೂಡ ಹೆಚ್ಹು ಬದಲವಣೆ ಕಂಡಿಲ್ಲ.
ಆಲ್ಲೊಂದು ಇಲ್ಲೊಂದು ಅಂತರ್ ಜಾತಿಯ ವಿವಾಹಗಳು ಯಾವ ಕ್ರಾಂತಿಯನ್ನು ಮಾಡಿಲ್ಲ...
ಆದರೆ ಆದರ್ಶಗಳು, ಮೌಲ್ಯಗಳು ಮಾತ್ರ ಗಾಳಿಗೆ ಹಾರಿ ಬಹು ದೊರ ಸಾಗಿ ಹೋಗಿವೆ.....

Sunday, 22 March 2009

ಅಗಮನ

ಮತ್ತೆ ಬಂದ ವಸಂತ....
ಹೂವರಳಿಸಿ, ಮಾವು ತೂಗಿಸಿ.....ಹೊಂಗೆ ತಳಿರಿಸಿ....
ನಿನ್ನ ನನ್ನ ಮಧುರ ನೆನಪ ಕೆರಳಿಸಿ.....
ವಸಂತ ಬಂದ ನಿನ್ನ ಹೂವ ನಗುವ ನೆನಪಿಸಲು..
ಆ ಮರದ ತುಂಬ ಅರಳಿ ನಿಂತಿದೆ ,ಪುಶ್ಪ ,ಚೆಲ್ಲಿದೆ ಪ್ರೀತಿಯ

ಆ ಗುಲ್ಮೊಹರ್ ಮರದ ಸಾಲು ಸಾಲು ಕಲಕಿದೆ ಈ ಮನದ ಕೊಳವನ್ನು
ನಿನ್ನ ನನ್ನ ಪ್ರೀತಿ ಕೂಡ ವಸಂತನಂತೆ....ಮಧುರ ಅನುಭವ ನೀಡಿ
ಮಾಯವಾಗಿದೆ ಆ ಸುಖದ ಕಲಪ್ನೆಯಲ್ಲೆ ನನ್ನನು ಬಿಟ್ಟು,

ವಸಂತ ಬರುವ ಮತ್ತೆ ಮತ್ತೆ , ಆದರೆ ನೀನಲ್ಲ,
ವಸಂತನ ಕುರುಹಾಗಿ ಉಳಿದಿದೆ,ಬಾಗಿಲ ತೂರಣ
ನನ್ನದೆಯಲ್ಲಿ ನಿನ್ನ ಈ ಪ್ರೀತಿ ನೆನಪೇ ಜೀವನದ .....

Tuesday, 17 February 2009

ಹಾಗೆ ಸುಮ್ಮನೆ......

ತುಂಬ ದಿನ ದಿನ್ದಾನೆ ಬ್ಲಾಗ್ ಬರೀಬೇಕು ಅಂತ ಯೋಚನೆ ಮಾಡ್ತಾನೆ ಇದ್ದೆ......
ಆದ್ರೆ ಬರೀಲೇ ಬೇಕು ಅಂತ ಅನಿಸಿದ್ದು, ಈ ಫೆಬ್ ೧೪ ಡೇ ಆದ್ಮೆಲೇನೆ.....
ಕೆಲವೊಮ್ಮೆ ನಮ್ಮ ಭ್ರಮೆಯ ಪ್ರಪಂಚನೆ..ವಾಸಿ ಅನ್ಸೋತ್ತೆ.....
ಎಷ್ಟು ಮುಗ್ದ ಮನಸ್ಸು ಗಳಿಗೆ ಆಘಾತ ಅಗೊತ್ತೆ .........
ಎಷ್ಟೇ ಆದರು ಅದು ಮನಸ್ಸು ಅಲ್ವ......ಗಾಜಿನ ಹಾಗೆ....ಹರಿತ ವೆಷ್ಟೋ ಅಷ್ಟೆ ಸೂಕ್ಷ್ಮ......
ಜೀವನದಲ್ಲಿ..ವಾಸ್ತವ ನ ಎದುರಿಸಿ ನಿಲ್ಲೋ ಧ್ಯ್ರ್ಯ ಇಲ್ಲ ಅಂದಾಗ ಭ್ರಮ ಲೋಕ ವೆ ಬಾಳು....ಬದುಕು.....
ಭ್ರಮೆ ಒಬ್ಬ ವ್ಯಕ್ತಿಯಾ ಬದುಕನ್ನು ಹಸನಾಗಿಸುತದ್ದೆ ಅಂದ್ರೆ ....ಯಾಕಾಗಬಾರದು.....

ಭ್ರಮೆ....

ಚಂದಿರ ಸುಂದರನೆಂಬ ಭ್ರಮೆಯಲ್ಲಿ....ಬದುಕಿತಿದೆ ಶತ ಶತಮಾನಗಳು.....
ಅವನ ಕಲೆಗಳನ್ನು..ಮುಚ್ಚಿ ಮೆಚ್ಚಿ...ಬರೆದಿಹರು ಹಲವರು.....
ವಾಸ್ತವ ಕಹಿ ಸತ್ಯ ಚಂದಿರನಲ್ಲ ಸುಂದರ....ಕೋಮಲ....
ಅವನೊಂದು....ಜೀವ ವಿಲ್ಲದ ಉಸಿರಿಲ್ಲದವ......

ನೀ.. ಎನ್ನ ಮೆಚ್ಚಿರುವೆ ಎಮ್ಬ ಭ್ರಮೆ ಯಲ್ಲೇ ನ ಬದುಕುವೆ....
ಮೆಚ್ಚಿLaವೇ... ಮಂದಿ ಚಂದಿರನ್ನು.....
ನೀ ಎನ್ನ ಪ್ರೀತಿಸುವೆ ಎಮ್ಬ ಭ್ರಮೆಯೇ ನನಗೆ ಸುಖವಿಯುತಿದೆ.....
ವಾಸ್ತವದಿಂದ ಬಲು ದೂರ ನ ಬಂದಾಯಿತು ಗೆಳಯ....
ಇನೆಂದು ನಾ ಹೋಗುವುದಿಲ್ಲ.........
ಆ ಪ್ರಪಂಚಕೆ....ನನ್ನ ಭಾವನೆ ಗಳನ್ನೂ ಕೊಂದ ಆ ಜಗಕೆ....

ಭ್ರಮೆಯೇ ವಾಸ್ತವ......ದ್ಯ್ವ ಚಿತ್ತವಿದ್ದರೆ.....
preethi...ಹುಡುಕಿ ಬರುವುದು...ಎಲ್ಲ ವಾಸ್ತವ ಭ್ರಮೆಗಳನು... ಮೀರಿ.....
ಮಾನುಷ ನಿಮಿತ್ತ.....ದೇವನೆಲ್ಲ ಚಿತ್ತ.....

Sunday, 4 January 2009

ಆಸೆ
ನೀ ಮುಡಿದ ಮಲ್ಲಿಗೆ
ನಾನಾಗಬೇಕು....ಗೆಳತಿ ನೀ ನಡೆವ ಹಾದಿಯಲಿ ಅರಳಿ.....
ನನ್ನ ಕಂಪ ಸೂಸಿ...ನಿನ್ನೆಡೆಗೆ ನನ್ನ ಬಾಹುಗಳ ಚಾಚಿ.....
ನೀ ನಡೆವೆ ಹಾದಿಯಲಿ ನಾ ಹೆಮ್ಮರವಗಬೇಕು.....
ಗೆಳತಿ ನನ್ನ ಕರಿಯ ನೆರಳಲ್ಲಿ ನಿನ್ನ ಕಾಯಬೇಕು......
ನಿನ್ನ ಕಿವಿಯ ಜುಮಿಕಿ...... ನಾನ್ಗಬೇಕೆಂಬ ಆಸೆ...ಗೆಳತಿ....
ಆಗಾಗ ನಿನ್ನ ಗಲ್ಲಕ್ಕೆ ಸೋಕಿ ಆ ಸ್ಪರ್ಶದಲ್ಲಿ....ನಾ ಧನ್ಯನಾಗುವೆ ......
ನೀ ಹಾಡುವ ಹಾದಿಗೆ ನಾ ರಾಗ ವಾಗಿ......ನಿನ್ನ ಕೈಯ ಬಳೆಗಳಾಗುವ ಆಸೆ ನನಗೆ....
ಗೆಳತಿ ನಿನ್ನ ಬಾಳ ಮುನ್ನುಡಿಯಾಗಿ....
ನಿನ್ನ ಮನದ ಕನ್ನಡಿಯಾಗಿ.....ನಿನ್ನ ಕನಸಾಗಿ ನಾ ನಿನ್ನ ಮನದಲ್ಲಿ....
ಇರುಳಲ್ಲಿ....ಹಗಲಲ್ಲಿ....ನಿನ್ನೊಳು ನಾ ನನ್ನೊಳು ನೀ ನಿರಂತರವಾಗಿ........

Thursday, 1 January 2009

ಹೊಸ ವರುಷದ ಹೊಸ ಬ್ಲಾಗ್......

ಈ ಪರೀಕ್ಷೆ....ತಲೆಬಿಸಿನಲ್ಲಿ.....ಬ್ಲಾಗ್ ಮಾಡಲಿಲ್ಲ.....
ಹೊಸವರುಷ ಬರ್ತಾ ಇದೆ....ಆದ್ರೆ ನಮ್ಮ ಆದರ್ಶ....ಸ್ವಭಾವ ...
ಬದ್ಳಗೊದೇನೆ ಇಲ್ಲ ಅನ್ನಿಸೊತ್ತೆ.....
ವರುಷದ ಕೊನೆಲ್ಲಿ ದೇಶ ಕಂಡ ಹಿಂಸೆ....ನೋವು....ನಮ್ಮನೆಲ್ಲ.....ಬಾಧಿಸಿದೆ.....
ದೇವರೆಂಬ ಹೆಸರಲ್ಲಿ.....ನಾವು ಎಂತ ಹಿಮ್ಸೇಲಿ ತೊಡಗಿದ್ದೇವೆ....ಅನ್ನೋದು ಯೋಚನೆ ಮಾಡಿದಾಗ....ಆಸ್ತಿಕ ವಾದಾನೆತಪ್ಪು ಅನ್ನೋ....ಅಭಿಪ್ರಾಯ ಬರೊತ್ತೆ......ಒಂದು...ತತ್ವ....ಜನರಿಗೆ...ಒಳ್ಳೇದು ಮಾಡಬೇಕೆ ಹೊರತು....ಹಾನಿಯಲ್ಲ....
ಹಾಗೆ ನೋಡಿದ್ರೆ....ಯಾರಿಗೂ ತೊಂದರೆಯಾಗದ....ನಾಸ್ತಿಕತೆ....ದೇವರಿಲ್ಲದ ಭಾವನೆಯೇ ಸರಿ....ಅಂತ ಅನಿಸ್ಬಿಡ್ತು....
ಅದ್ದ್ರೆ ಏನು ಮಾಡೋದು...ಈ ಮನಸ್ಸು....ದೇವರೆಂಬ...ಆ ಶಕ್ತಿಗೆ ಬಾಗಿ ಬಿಟ್ಟಿದೆ....
ಅದಕ್ಕೆ ಆ ಶಕ್ತಿಯನ್ನು ...ಈ ಭುವಿ ಯಲ್ಲಿ...ಶಾಂತಿ....ಪ್ರೀತಿ....ಪ್ರೇಮ ವೆಂಬ ಸದ್ಭಾವನೆಗಳು....ನೆಲಸಲಿ ಎಂದು ಪ್ರಾರ್ಥಿಸುವೆ......

ಹೊಸ ವರುಷ ತರುತಿದೆ ಹೊಸ ಆಸೆಗಳನು....
ಮನಸಿಗೆ ನೂರು ಕನಸುಗಳನು....ಕಾಸಿಲ್ಲ ಕರುಬಿಲ್ಲ ಈ ಕನಸುಗಳಿಗೆ....
ಆದರೆ ಜೀವ ವಿದೆ ಈ ಮನಸುಗಳಿಗೆ.....ಹೃದಯದಾಳದ ಸುಪ್ತ aasegalige....
ಈ ಕನಸುಗಳ ಬೆನಟ್ಟಿ ಹೊಗೂಣ ....
ನೆನಪಿರಲಿ ....ಆ ದಾರಿ ಬಲು ಸೊಗಸು ನೊಡಲು ....
ಕ್ರಮಿಸಲು...ನೂರು ಅಡೆ ತಡೆಗಳು.....
ಆದರು ಜಯಿಸಿ ಯೆಲ್ಲವನು....ಸಾಗೊಣ ಮುಂದೆ ....
ಕಾದಿದೆ ಕನಸುಗಳ ಹೂ ದಾರಿ....ಮುಳ್ಲುಗಳು ಬರಿಯ...ನೆವ ಮಾತ್ರ....

Tuesday, 9 December 2008

ಪರೀಕ್ಷೆಗೆ ಓದೋದ್ರಲ್ಲಿ ....ಬಾಂಬ್ ಬ್ಲಾಸ್ಟ್ ಗಲಾಟೆನಲ್ಲಿ ಯಾಕೋ ಬ್ಲಾಗ್ ಬರೀಲ್ಲಿಕ್ಕೆ ಆಗ್ಲಿಲ್ಲ.....
ಮನಸ್ಸು ಮೌನಕ್ಕೆ ಶರಣಾಗಿ ಬಿಡ್ತು.....
ಹಾಗೆ ಒಮ್ಮೆ ಅಲ್ಲ.....ತುಂಬ ಸರ್ತಿ ನಂಗೆ ಮೌನ ನೇ ಮೇಲು ಅನಿಸೋದು ಹೆಚ್ಚು........
ಹಾಗೆ ನೀವು ಎಂದಾದರು ಯಾರದಾದರು ಕಣ್ಣಲ್ಲಿ ಇಣುಕಿ ನೋಡಿದು....ಉಂಟ...?
ಅಲ್ಲಿ ಮೌನ ಮನೆ ಮಾಡಿದೆಯೋ.....ನೋವುಡುಗಟ್ಟಿದೆಯೋ......... ಅಂತ...
ಹಾಗೆ ಒಮ್ಮೆ ನೋಡಿದ್ರೆ ಅ ಅವರಿಗೆ ಎಷ್ಟು ಖುಷಿ ....ಆಗುತ್ತೆ ಗೊತ್ತ.....ನೋಡ ಬೇಕು ಅಷ್ಟೆ....
ಪ್ರತಿಕ್ರಿಯೆ ಮಾತ್ರ.....ಅದನ್ನ ತೋರಿಸಬಾರದು......ತೋರಿಸಲೂ.....ಬಹುದು ನಿಮ್ಮ ಆಯ್ಕೆ....
ಕಣ್ಣ ಕಡಲು.....
ಒಮ್ಮೆ ನನ್ನ ಕಣ್ಣುಗಳಲ್ಲಿ ಇಣುಕಿ ನೋಡು ಗೆಳೆಯ.....
ಅಲ್ಲೆಷ್ಟು.... ನೋವಿದೆ.....ನಿನ್ನ ಪ್ರತಿ ಎಷ್ಟು ಪ್ರೀತಿ ಇದೆ.....
ಬದುಕಿನ ಮೇಲೆಷ್ಟು ಆಸೆ ಯಿದೆ........
ನೀ.. ಒಮ್ಮೆ ಹಾಗೆ ಈ ಕಣ್ಣ ಕಡಲಲ್ಲಿ...
ಇಳಿದು....ನೋಡು ಅಲ್ಲೆಷ್ಟು.... ....ಪ್ರೀತಿಯ ಮುತ್ತು ಗಳಿವೆ....
ಅಭಿಮಾನದ ಗುರುತುಗಳಿವೆ.....
ಉತ್ಸಾಹದ....ಚಿಲುಮೆ ಇದೆ.....
ಈ ಕಣ್ಣ ನೀ .... ಕಾಣದೆ.....ಬೇರೆಲ್ಲೋ ಹುಡುಕಿ....
ಅಲೆಯಬೇಡ.....ಗೆಳೆಯ....ಒಮ್ಮೆ ...ಈ ಕಣ್ಣ ನೀ ಕಂಡರೆ ಸಾಕು....
ಆ ಸುಖ ದಲ್ಲೇ ಕಣ್ಮುಚ್ಚಿ ಬಿಡುವೆ ನಾನು......
ಆ ಕಣ್ಣು ಗಳಿಗೆ ಈ ಕವನದ ಅರ್ಪಣೆ.....