Monday, 28 May 2012

ಕಡಲು-ದೋಣಿ-ಆಂಬಿಗ-ಓಡೆಯ ಹತ್ತಿದ ದೋಣಿ ತೀರ ಸೇರುವುದೆಂಬ ನಂಬಿಕೆಯಲಿ ಹತ್ತಿದೆ ನಿನ್ನ ಜೀವನದ ಹಾಯಿಯ.... ನಂಬಿದೆ ನಿನ್ನ ಅಂಬಿಗನೆ..ತನು ಮನ ಧನದಲಿ ಸರ್ವಸ್ವವು ನಿನ್ನದೆಂಬ ಭ್ರಮೆಯಲಿ ಕಡಲು ಭಯಾನಕವಾದರು ನಿನ್ನ ದೋಣಿಯ ನೆಚ್ಚಿದೆ... ಅಂಬಿಗನ ಕಣ್ಣಿನ ಬೆಳಕಲಿ ಸಾಗರವನ್ನೇ ದಾಟುವೆನೆಂಬ ನಂಬುಗೆಯಲಿ ಚಿಕ್ಕದೊಂದು ಬಿರುಗಾಳಿಗೆ ನಮ್ಮ ನೌಕೆ ಹೀಗೆ ಆಡಿ ಹೋಗುವುದೆಂಬ ಕಲ್ಪನೆಯಿಲ್ಲ ಬಾಳ ಹಾಯಿ ಮಧ್ಯದಲ್ಲಿ ತೊತು ಬೀಳುವುದೆಂದು.... ಹಡಗು ಕಡಲು ಏರಡರ ಒಡೆಯನೊಬ್ಬನಿರುವನು... ಅವನೆ ಬರೆವನು ನಮ್ಮ ಪುಟ್ಟ ದೋಣಿಯ ಹಣೇಬರಹವನ್ನು.. ಯಾರ ನೆಚ್ಚಿ ಹತ್ತಿದೆ ಈ ದೋಣಿಯನ್ನು ಅವನೆ ಕಾಣಿಸುವನು ದೋಣಿಗೊಂದು ತೀರವನ್ನು...