Monday, 28 May 2012

ಕಡಲು-ದೋಣಿ-ಆಂಬಿಗ-ಓಡೆಯ ಹತ್ತಿದ ದೋಣಿ ತೀರ ಸೇರುವುದೆಂಬ ನಂಬಿಕೆಯಲಿ ಹತ್ತಿದೆ ನಿನ್ನ ಜೀವನದ ಹಾಯಿಯ.... ನಂಬಿದೆ ನಿನ್ನ ಅಂಬಿಗನೆ..ತನು ಮನ ಧನದಲಿ ಸರ್ವಸ್ವವು ನಿನ್ನದೆಂಬ ಭ್ರಮೆಯಲಿ ಕಡಲು ಭಯಾನಕವಾದರು ನಿನ್ನ ದೋಣಿಯ ನೆಚ್ಚಿದೆ... ಅಂಬಿಗನ ಕಣ್ಣಿನ ಬೆಳಕಲಿ ಸಾಗರವನ್ನೇ ದಾಟುವೆನೆಂಬ ನಂಬುಗೆಯಲಿ ಚಿಕ್ಕದೊಂದು ಬಿರುಗಾಳಿಗೆ ನಮ್ಮ ನೌಕೆ ಹೀಗೆ ಆಡಿ ಹೋಗುವುದೆಂಬ ಕಲ್ಪನೆಯಿಲ್ಲ ಬಾಳ ಹಾಯಿ ಮಧ್ಯದಲ್ಲಿ ತೊತು ಬೀಳುವುದೆಂದು.... ಹಡಗು ಕಡಲು ಏರಡರ ಒಡೆಯನೊಬ್ಬನಿರುವನು... ಅವನೆ ಬರೆವನು ನಮ್ಮ ಪುಟ್ಟ ದೋಣಿಯ ಹಣೇಬರಹವನ್ನು.. ಯಾರ ನೆಚ್ಚಿ ಹತ್ತಿದೆ ಈ ದೋಣಿಯನ್ನು ಅವನೆ ಕಾಣಿಸುವನು ದೋಣಿಗೊಂದು ತೀರವನ್ನು...

Thursday, 12 April 2012

ಅಮ್ಮ

ಹಲವು ತಿಂಗಳುಗಳಿಂದ ಬ್ಲಾಗಿನ ಕಡೆ ಬರಲಿಲ್ಲ.ಜೀವನದ ಕೆಲವು ಹೊಸ ಮಜಲುಗಳು ತೆರೆದು...ಸ್ವಲ್ಪ ಬುಸ್ಯ್ ಅಗಿದ್ದೆ ಅಷ್ಟೆ.
ತಾಯಿಯಾಗುವ ಅನುಭವ ನನ್ನ ಕಣ್ಣನ್ನು ತೆರೆಸಿತು ಅಂದರೆ ತಪ್ಪಿಲ್ಲ.ಹೆಣ್ಣುಮಕ್ಕಳು ತಾವು ಆ ಸ್ಟೇಝ್ ತಲುಪಿದಾಗ ಅದರ ಅರಿವು ಮೂಡುವುದು.
ನನ್ನ ತಾಯಿಯು ಇದೇ ರೀತಿ ಕಷ್ಟ್ಪಟ್ಟಳು ಅನ್ನೋದು ನಮ್ಗೆ ಈಗ ಗೊತ್ತಾಗೊತ್ತೆ.

ಈ ಮೂಲಕ ಏಲ್ಲ ತಾಯಂದಿರಿಗು ನನ್ನ ನಮನ.

ಮನಸ್ವಿನಿ

ದೇವರಲ್ಲೊಂದು ವರ

ಏಲ್ಲ ತಾರೆಯರ ಮೀರಿ ನಿನ್ನ ಬೆಳಕು ನನ್ನ ಕಡೆಗೆ ಸದಾ
ಹರಿದು ಬರುವುದು....ಅಮ್ಮ ನಿನ್ನ ಮನದ ಹಲವು ಆಶಯಗಳ
ಕನಸಿನ ಕೂಸಾಗಿ ಬೆಳೆಸಿದೆ ನೀ ಏನ್ನ...

ನಿನ್ನ ಕನಸುಗಳನ್ನು ಹಲವು ಬಾರಿ ಒಡೆದೆ ನಾನು
ಚೂರಾಗಲಿಲ್ಲ ಕಮ್ಮಿ ನನ್ನ ಮೇಲೆ ನಿನ್ನ ಪ್ರೀತಿಯಾ ಜೇನು

ದೇವನೊಮ್ಮೆ ನನ್ನ ಮೇಲೆ ಮುನಿಸಿಕೊಂಡನೇನೊ ಆದರೆ
ನಿನ್ನ ಕೋಪವೆಂದು ಸದಾ ಹುಸಿ ಮುನಿಸಾಗಿಯೆ ಉಳಿದಿತ್ತು

ಏಲ್ಲ ಸಹಿಸಿ,ಪ್ರೀತಿಯ ಸಕ್ಕರೆಯ ಕುಡಿಸಿ ಮತ್ತೆ ನನ್ನ

ಆರಿಗೊ ಬಿಟ್ಟುಕೊಡುವ ಈ ಲೊಕದ ರೊಢಿಯ ತೆಗಳಬೇಕು
ನಿನ್ನ ಮಡಿಲ ಕೊಸಾಗಿಯೆ ಇರಬಾರದೇನು?

ಅನಿಸುತಿದೆ ಹಾಗೊಂದು ವರವ ಬೇಡಬೇಕು ಆ ದೇವರನ್ನು....
ನಾ ಎಂದು ಮಗಳೇ ಆಗಬೇಕು ನನ್ನ ತಾಯಿಗಿನ್ನು.....