Friday, 22 April 2011


ಹಾಯ್ ಹೆಲ್ಲೊ ಏನು ಹೇಳಬೇಕೆಂದು ಗೊತ್ತಾಗ್ತ ಇಲ್ಲ.ತುಂಬಾ ದಿನಗಳ ನಂತರ ಬ್ಲಾಗನ್ನು ಬರೆಯಲು ಪ್ರಯತ್ನ ಮಾಡುತ್ತಿದ್ದೆನೆ.ಶರಧಿ ಬ್ಲಾಗಿನ ಲೇಖಕಿ ಮದುವೆಯ ನಂತರ ಏಕೆ ಹೆಚ್ಚು ಬರೆಯುತ್ತಿಲ್ಲ ಏಂಬ ಸತ್ಯ ಈಗ ನನಗೂ ಅರಿವೆಗೆ ಬರುತ್ತಿದೆ.ಅನುಭವಕ್ಕಿಂತ ದೊಡ್ದ ಪಾತ ವಿಲ್ಲ ಏಂಬ ಹಿರಿಯರ ಮಾತು ಸತ್ಯ ಅಲ್ವಾ.ಹೊಸ ಜೀವನಕ್ಕೆ ಹೊಂದಿಕ್ಕೊಳ್ಲುವ ಪ್ರಯತ್ನದಲ್ಲಿ ನಮ್ಮತನವನ್ನು ಉಳಿಸಿಕೊಳ್ಳುವ ಯತ್ನದಲ್ಲಿ ಏಷ್ತು ಯಶಸ್ವಿಯಾಗುತ್ತೆವೆಂಬುದನ್ನು ಸಮಯವೇ ಹೇಳಬೇಕು.

ನಿನ್ನ ನಂಬಿ ಸಪ್ತ ಹೆಜ್ಜೆಇಟ್ಟು ಬಂದೆ ನಲ್ಲ
ಹೆತ್ತು ಹೊತ್ತ ಮಣ್ಣ ಬಿಟ್ಟು,ನನ್ನದೆಲ್ಲವ ತೊರೆದು ನಿನ್ನ
ಒಂದು ಕಿರುಬೆರಳ ಹಿಡಿದು,

ಮುಂದೆ ಬರುವ ಏಲ್ಲ ವಸಂತಗಳು ನಿನ್ನೊಡನೆ,ಶಿಶಿರನ ಮಂಜು ನನ್ನ ದಾಟಿ ನಿನ್ನ್
ಮುಟ್ಟಬೇಕು,
ಬಾನಲ್ಲಿ ನಡೆವ ಏಲ್ಲ ಚಿತ್ತಾರಗಳಿಗೆ ನಾವು ಸಾಕ್ಷಿಯಾಗಬೇಕು

ನಿನ್ನ ಒಳಹೊಕ್ಕು ನನ್ನ ನಾನು ಕಂಡುಕ್ಕೊಳ್ಳಬೇಕು
ನಿನ್ನ ಹೆಜ್ಜೆ ಗುರುತುಗಳಲ್ಲಿ ಕಾಣದಂತೆ ನನ್ನದು ಸೇರಿಕೊಳ್ಳಬೇಕು

ನಿನ್ನ ನೆನಪನ್ನು ಈ ಜಗತ್ತಿನಲ್ಲಿ ಮತ್ತೆ ಮುಂದುವರೆಸಲು,
ನಾವು ನೆಟ್ಟ ಮರವು ಚಿಗೊರೆಡೆದು ಬೆಳೆದು ಹೂವ ಬಿಟ್ಟು
ಕಾಯ ಹೊತ್ತು ಬೀಜ ಬಿತ್ತಿ ಮರವಾಗಬೆಕು....

ನಲ್ಲ ಈ ನಡುವೆ ನಿನ್ನ ಜೊತೆ ಸಾಗಿ ಬರುವ
ನಿನ್ನನೆ ಸುತ್ತಿ ಅಪ್ಪಿರುವ ಈ ಬಳ್ಳಿಯ
ಪುಟ್ಟ ಪುಟ್ಟ ಸ್ವಪ್ನಗಳಿಗೆ ನಿನ್ನ ಹೃದಯದಲ್ಲಿ ಸ್ಠಾನವಿದೆಯೆ?
ಅಶ್ರುಬಿಂದುಗಳಿಗೆ ನಿನ್ನ ಹೆಗಲು ತಲೆದಿಂಬಾಗುವುದೆ?

ಅಲ್ಲವೆ ಮರವ ಸುತ್ತಿ ಬಳಸಿರುವ ನೊರಾರು ಬಳ್ಲಿಗಳಲ್ಲಿ
ಈ ಸಣ್ಣ ಬಳ್ಳಿಯು ಕಾಣದಂತೆ ಹೋಗುವುದೆ.....

1 comment:

ಸಾಗರದಾಚೆಯ ಇಂಚರ said...

ಏನು ಬರಿಯಬೇಕು ಅಂತ ತಿಳಿದೇನೆ, ತುಂಬಾ ಚೆನ್ನಾಗಿ ಬರೆದಿದ್ದಿರ

ಬರೆಯುತ್ತಿರಿ