Monday, 28 September 2009

ನನಾಸಾಗಲೆಂದು ಬಯಸುವ ಕನಸು

ನಿನ್ನ ಕನಸಿನಿಂದ ನಾ ಬಂದಿದ್ದೆ ದೂರ ಸಾಗಿ....
ಕನಸು ಬರಿ ಕನಸು ಅದು ಚೆನ್ನ ,
ನಿದಿರೆಯಲ್ಲಿ ಕಾಣಲು....ಸವಿ ನಗುವ ಮೂಡಿಸುವುದು
ಅದು ಮರೆಯಗುವುದು ನೋವಿನ ಬುತ್ತಿಯನಿತ್ತು....
ನಿನ್ನ ನೆನಪು ನಿದಿರೆಯನ್ನು ದೂರ ಮಾಡಲು...
ಕನಸು ನಿನ್ನದು ಮಲಗು ಮಲಗೆಂದು ಲಾಲಿ ಹಾಡಿ
ಮತ್ತೆ ನನ್ನನು ನಿನ್ನ ಕನಸ ತೆಕ್ಕೆಗೆ ಸಾಗಿಸಿದೆ
ಮಧುರ ನೆನಪುಗಳ, ಸಿಹಿ ಕನಸುಗಳೀ ಹಾಗೆ
ಕಾಣಲು ಚೆನ್ನ .....ನಿದಿರೆಯಲ್ಲಿ.....
ವಾಸ್ತವದ ಅರಿವಾದಾಗ ನೊವು ಮನದ ತುಂಬ.....
ಹಾಗೆಂದು ಮನ ಕನಸ ಕಾಣುವುದ ಬಿಡುವುದೆ.....
ಗೆಳತಿ....ನಿನಗು ಇರಲಿ ಸವಿ ಗನಸುಗಳ ಬುತ್ತಿ
ಈ ನವರಾತ್ರಿಯ ನವ ನವೀನ ಸ್ಮ್ರಿತಿಯು ನನಪಿಗೆ ಸದಾ
ಬರಲಿ ....ಅವು ನಿಜವಾಗುವುದೆಂಬ ಕನಸು ನಿನ್ನದಾಗಲಿ.........