ಆಸೆ
ನೀ ಮುಡಿದ ಮಲ್ಲಿಗೆ
ನಾನಾಗಬೇಕು....ಗೆಳತಿ ನೀ ನಡೆವ ಹಾದಿಯಲಿ ಅರಳಿ.....
ನನ್ನ ಕಂಪ ಸೂಸಿ...ನಿನ್ನೆಡೆಗೆ ನನ್ನ ಬಾಹುಗಳ ಚಾಚಿ.....
ನೀ ನಡೆವೆ ಹಾದಿಯಲಿ ನಾ ಹೆಮ್ಮರವಗಬೇಕು.....
ಗೆಳತಿ ನನ್ನ ಕರಿಯ ನೆರಳಲ್ಲಿ ನಿನ್ನ ಕಾಯಬೇಕು......
ನಿನ್ನ ಕಿವಿಯ ಜುಮಿಕಿ...... ನಾನ್ಗಬೇಕೆಂಬ ಆಸೆ...ಗೆಳತಿ....
ಆಗಾಗ ನಿನ್ನ ಗಲ್ಲಕ್ಕೆ ಸೋಕಿ ಆ ಸ್ಪರ್ಶದಲ್ಲಿ....ನಾ ಧನ್ಯನಾಗುವೆ ......
ನೀ ಹಾಡುವ ಹಾದಿಗೆ ನಾ ರಾಗ ವಾಗಿ......ನಿನ್ನ ಕೈಯ ಬಳೆಗಳಾಗುವ ಆಸೆ ನನಗೆ....
ಗೆಳತಿ ನಿನ್ನ ಬಾಳ ಮುನ್ನುಡಿಯಾಗಿ....
ನಿನ್ನ ಮನದ ಕನ್ನಡಿಯಾಗಿ.....ನಿನ್ನ ಕನಸಾಗಿ ನಾ ನಿನ್ನ ಮನದಲ್ಲಿ....
ಇರುಳಲ್ಲಿ....ಹಗಲಲ್ಲಿ....ನಿನ್ನೊಳು ನಾ ನನ್ನೊಳು ನೀ ನಿರಂತರವಾಗಿ........