ಆ ದಿನಗಳು, ಆಗ ಮನಸ್ಸು ಹರಿದ ರೀತಿ......
ಮುಚ್ಚು ಮರೆ ಇತ್ತು, ನಾಚಿಕೆ ಸಂಕೂಚಗಳು ತುಂಬಿ ಪ್ರಪಂಚವೆಲ್ಲ ಹಸಿರಾಗಿ ಕಂಗೊಳಿಸುತಿತ್ತು.....
ಯಾರಿಗಾಗೋ ಕಾಯುವ ತವಕ ಮನಸ್ಸಿಗೆ, ರಂಗು ರಂಗಿನ ಕನಸು ಮನಸಿನ ತುಂಬ.....ಆ ಅವನ ಕಲ್ಪನೆ....
ಅದು ನಿಜವಾಗಲು ಹುಚ್ಚು ಕೋಡಿ ಮನಸೇ ಸರಿ.ಆ ದಿನಗಳ ನೆನಪಿನಲ್ಲಿ ಈ ಕವನ ಆ ಹರೆಯದ ಮನಸ್ಸುಗಳಿಗಾಗಿ ಆರ್ಪಣೆ.
ಬರುವೆ ಯಾವಾಗ ಗೆಳೆಯ?
ತಿಂಗಳು ತುಂಬಿ, ಚಂದಿರನ ನಂಬಿಬಾನಲ್ಲಿ ಮೂಡಿತು ತಾರೆಗಳ ಮದರಂಗಿ
ಶಶಿಕಾಂತನ ಸನಿಹ ಬಯಸಿ ಕಾದಿತ್ತು
ಸಹಸ್ರ ಸಹಸ್ರ ತಾರೆಗಳ ದಂಡಿತ್ತು
ನನಗೆ ನಿನ್ನದೇ ನೆನಪಾಗ, ನೀ ಎನ್ನ
ಬಾಳಿನ ಶಶಿಕಾಂತನಾಗಿ ಬರುವೆ ಯಾವಾಗ
ಹುಣ್ಣ್ಣಿಮೆಯ ಹಾಲ್ ಬೆಳಕು ಬಾನಿಗೆ ಚೆಲ್ಲಿದಂತೆ
ಬಂದೆನ್ನ ಬಾಳಿಗೆ ಬೆಳಕಾಗುವುದು ಯಾವಗ?
ಕಾದಿಹೆನು ನಾನು ಆ ದಿನಕ್ಕಾಗಿ,
ನ್ನಿನೂಡನೆ ಕೂತು ಸವಿಯಲು
ಹುಣ್ಣ್ಣಿಮೆಯ ಹೋಳಿಗೆಯನ್ನು
ಬರುವುದು ನೀ ಯಾವಾಗ , ಗೆಳೆಯ ಯವಾಗ?
ಬಾಳ ಪಯಣದಲ್ಲಿ ನಾವಿಬ್ಬರು ಜೊತೆಯಾಗಿ
ಹುಣ್ಣ್ಣಿಮೆ ಅಮಾವಾಸ್ಯೆಗಳ ದಾಟಿ ಎಂದೆಂದು,
ನನ್ನ ಬಾಳಿಗೆ ನೀ ಬರುವೆ ಯಾವಗ?
ಅಳಿವಿಲ್ಲದ ಪುನ್ನಮಿಯ ಚಂದಿರನಾಗಿ.