ಆದ್ರೆ ಬೆಲೆ ಬಗ್ಗೆ ಚಿಂತೆ ಮಾಡ್ತಾ ಮಾಡ್ತಾ ನಾವು ಇನ್ನು ಹೆಚ್ಚು ಖರ್ಚು ಮಾಡ್ತಾ ಇದ್ದಿವೇನೋ ಅನ್ಕೊಂತೀನಿ
ಹಾಗೇನೇ, ಆ ದೀಪ ದ ಬೆಳಕು..ಪಟಾಕಿ ಸಂಭ್ರಮ ಎಲ್ಲಾನು ಮರೀತಾಇದ್ದಿವಿ....
ಸ್ನೇಹಿತೆ ಹೀಗೆ ಯಾರದೋ ಮನೆ ಮುಂದೆ ಹೊಡೆದು ಬಿಟ್ಟಿರೋ ಪಟಾಕಿ ಕಸ ತಂದು ಅವರ ಮನೆ ಮುಂದೆ ಹಾಕಿ
ತಾವೇ ಅಷ್ಟೂ ಹೊಡೆದ್ದಿದು ಅಂತ ಜಂಬ ಮಾಡ್ತಾ ಇದರಂತೆ......
ಅದೇ dhaatiyalli ಈ ಕವಿತೆ .......
ಬೆಳಕು
ಚಂದ್ರ ನಿನ್ನ ಬೆಳಕನ್ನು ಮುಚ್ಚಿ ಬೆಳಗಿದೆ
ಹಣತೆಯ ಪ್ರಭೆ ಪಸರಿಸಿದೆ ಊರೆಲ್ಲ
ಕತ್ತಲು ಕವಿದ ಈ ಭುವಿಗೆ ಇನ್ನೊಂದು
ಆಶಾಕಿರಣ ........
ಹಾ ಹಾ ನೀ ಹೀಗೆ ಅಸೂಯೆಪಡಬೇಡ ಶಶಾಂಕ...
ದಿಗಿಲು ಬೇಡ ನನ್ನ ಚಂದ್ರಮ ಇದೆಲ್ಲ ಕೇವಲ ರಾಮ, ಬಲಿಯರ
ಲಕ್ಷ್ಮಿ ದೇವಿಯರ ಸ್ವಾಗತಕ್ಕೆ ಮಾತ್ರ...........
ದೀಪಾವಳಿಯ ೩ ದಿನಗಳಿಗೆ ಮಾತ್ರ........
ನೀನೆ ಎಂದು ನಮ್ಮೆಲ್ಲರ ಬಾಳಿಗೆ ನಿರಂತರ ದೀವಿಗೆ.......
ಈ ಸತ್ಯ , ಪ್ರಕೃತಿ ನಿನಗೆ ನೀಡಿದ ವರ ಮಾತ್ರ
ಹಾಗೆಂದು ನೀ ಕೂಡ ಹಿಗ್ಗ ಬೇಡ
ಇನ್ನೊಂದು ಸತ್ಯ ವ ಮೊದಲು ನೀ ಅರಿಯಲೇಬೇಕು.....ನೀ
ಕೂಡ ಕಣ್ಮರೆ ಯಾಗುವೆ ಗ್ರಹಣದ ದಿನದಂದು....
ಅದ್ದರಿಂದ ಚಂದ್ರ, ಸೂರ್ಯ , ಹಣತೆ ಎಲ್ಲ ವೂ
ಪಂಜು , ಲಾತಿನು , ವಿದ್ಯುತ್ ದೀಪ
ಎಲ್ಲ ಆ ದೇವನ ವಿಧ ವಿಧದ ಬೆಳಕಿನ ಪ್ರತಿರೂಪಗಳು......
ಬಾ ಈ ದೀಪಾವಳಿಗೆ, ದೀಪ ದ ಹಲವು ಪ್ರತಿರೂಪದ ಆ ಮಂಗಳ ಮೂರುತಿಗೆ
ಬಾಗಿ ನಮಿಸಿ ಕರ ಜೋಡಿಸಿ ನಮಿಸುವ.........
ದೀಪಾವಳಿಯ ಹಾರ್ದಿಕ ಶುಭಾಶಯಗಳು......