ಮನಸ್ಸು ಮೌನಕ್ಕೆ ಶರಣಾಗಿ ಬಿಡ್ತು.....
ಹಾಗೆ ಒಮ್ಮೆ ಅಲ್ಲ.....ತುಂಬ ಸರ್ತಿ ನಂಗೆ ಮೌನ ನೇ ಮೇಲು ಅನಿಸೋದು ಹೆಚ್ಚು........
ಹಾಗೆ ನೀವು ಎಂದಾದರು ಯಾರದಾದರು ಕಣ್ಣಲ್ಲಿ ಇಣುಕಿ ನೋಡಿದು....ಉಂಟ...?
ಅಲ್ಲಿ ಮೌನ ಮನೆ ಮಾಡಿದೆಯೋ.....ನೋವು ಮಡುಗಟ್ಟಿದೆಯೋ......... ಅಂತ...
ಹಾಗೆ ಒಮ್ಮೆ ನೋಡಿದ್ರೆ ಅ ಅವರಿಗೆ ಎಷ್ಟು ಖುಷಿ ....ಆಗುತ್ತೆ ಗೊತ್ತ.....ನೋಡ ಬೇಕು ಅಷ್ಟೆ....
ಪ್ರತಿಕ್ರಿಯೆ ಮಾತ್ರ.....ಅದನ್ನ ತೋರಿಸಬಾರದು......ತೋರಿಸಲೂ.....ಬಹುದು ನಿಮ್ಮ ಆಯ್ಕೆ....
ಕಣ್ಣ ಕಡಲು.....
ಒಮ್ಮೆ ನನ್ನ ಕಣ್ಣುಗಳಲ್ಲಿ ಇಣುಕಿ ನೋಡು ಗೆಳೆಯ.....
ಅಲ್ಲೆಷ್ಟು.... ನೋವಿದೆ.....ನಿನ್ನ ಪ್ರತಿ ಎಷ್ಟು ಪ್ರೀತಿ ಇದೆ.....
ಬದುಕಿನ ಮೇಲೆಷ್ಟು ಆಸೆ ಯಿದೆ........
ನೀ.. ಒಮ್ಮೆ ಹಾಗೆ ಈ ಕಣ್ಣ ಕಡಲಲ್ಲಿ...
ಇಳಿದು....ನೋಡು ಅಲ್ಲೆಷ್ಟು.... ....ಪ್ರೀತಿಯ ಮುತ್ತು ಗಳಿವೆ....
ಅಭಿಮಾನದ ಗುರುತುಗಳಿವೆ.....
ಉತ್ಸಾಹದ....ಚಿಲುಮೆ ಇದೆ.....
ಈ ಕಣ್ಣ ನೀ .... ಕಾಣದೆ.....ಬೇರೆಲ್ಲೋ ಹುಡುಕಿ....
ಅಲೆಯಬೇಡ.....ಗೆಳೆಯ....ಒಮ್ಮೆ ...ಈ ಕಣ್ಣ ನೀ ಕಂಡರೆ ಸಾಕು....
ಆ ಸುಖ ದಲ್ಲೇ ಕಣ್ಮುಚ್ಚಿ ಬಿಡುವೆ ನಾನು......