Sunday, 1 November 2009

ಕನ್ನಡದ ಸಿನಿಮಾ ಸಾಹಿತ್ಯ

ಕನ್ನಡ ಸಾಹಿತ್ಯದ ಚರಿತ್ರೆ ೫ ನೆ ಶತಮಾನದಲ್ಲಿ ಕಾಣಬಹುದಾಗಿದೆ.ಆದಿ ಕವಿ ಪಂಪ, ರನ್ನ, ಕುಮಾರವ್ಯಾಸರಿಂದ
ಹಿಡಿದು ರನ್ನ,ದಾಸ ಸಾಹಿತ್ಯ, ವಚನ ಸಾಹಿತ್ಯ , ನಾಟಕ ,ನವೋದಯ, ನವ್ಯ , ಬಂಡಾಯ ಪರಂಪರೆಯಿಂದ ನಡೆದು ಬಂದಿದೆ.
ಸಾಹಿತ್ಯದ ಪರಿಮಳವನ್ನು , ಕಂಪನ್ನು ಪಸರಿಸುವಲ್ಲಿ ನಮ್ಮ ದೃಶ್ಯ ಮಾಧ್ಯಮವಾದ ಚಲನಚಿತ್ರ, ಆಕಾಶವಾಣಿಗಳು ಮುಖ್ಯ ಪಾತ್ರವಹಿಸುತ್ತವೆ.ಅನಕ್ಷರಸ್ತರು.....ಸಾಹಿತ್ಯದ ಅಭಿರುಚಿ ಇಲ್ಲದವರಿಗೂ ಹಾಡುಗಳು ತಲುಪುವುದು ಈ ಸಿನಿಮಾ ರೇಡಿಯೋಗಳಿಂದ ಮಾತ್ರ.ಹೀಗಿರುವಾಗ ಇಂದಿನ ಚಿತ್ರಗಳಲ್ಲಿ ಉತ್ತಮ ಸಾಹಿತ್ಯದ ಜೊತೆಯಲ್ಲಿ ಅಥವಾ ಅದಕಿಂತ ಹೆಚ್ಚು ವೇಗದಲ್ಲಿ ಅಶ್ಲೀಲ ಸಾಹಿತ್ಯ ಬೆಳೆಯುತ್ತಿದೆ.ಹಲವಾರು ಕವಿಗಳ ಹಲವು ಸುಮಧುರ ಹಾಡುಗಳನ್ನು ಕೇಳಬೇಕು.
ಆದರೆ ಎಲ್ಲಿಯ ಮೂಡಲ ಮನೆಯ ಮುತ್ತಿನ ನೀರಿನ.....ಎಲ್ಲಿಯ ಆತಂಕವಾದಿಗಳ ಹೆಸರಲ್ಲಿನಈಗಿನ ಹಾಡುಗಳು.......
ಇವು ಏನು ಪ್ರತಿಪಾದಿಸುತ್ತಿದೆ?

ನಮ್ಮ ಭಾಷೆಯ ಅಭಿಮಾನ,ಕೇವಲ ಘೋಷಣೆಗಳನ್ನು ಕೂಗುವುದರಲ್ಲಿ ಮಾತ್ರವಲ್ಲ....ನಮ್ಮ ಶ್ರೀಮಂತ ಸಾಹಿತ್ಯವನ್ನು ಕಾಪಾಡಿ....ಉತಮ ಅಭಿರುಚಿಯ ಬೆಳವಣಿಗೆ ಕೂಡ ಮುಖ್ಯ ಎಂದು.....ನನ್ನ ಅಭಿಪ್ರಾಯ.....
ಈ ವಿಚಾರದ ಪ್ರಸ್ತಾಪನೆ ನನ್ನ ಬಹುದಿನದ ಬಯಕೆ.ಕ್ಯಾಬ್ನಲ್ಲಿ ವಿವಿಧ ರೀತಿಯ ಕೀಳುಮಟ್ಟದ ಅಭಿರುಚಿಯ ಅಶ್ಲೀಲ ಸಾಹಿತ್ಯದ ಹಾಡುಗಳು ಇದಕ್ಕೆ ಕಾರಣ.
ನಮ್ಮ ಜೊತೆ ಕೂತಿರುವ ಬೇರೆ ಭಾಷೆಯ ಜನರಿಗೆ ಅರ್ಥವಾಗದ ನಮಗೆ ತಿಳಿಯುವ ಈ ಕೆಟ್ಟ ಹಾಡುಗಳನು ಬದಲಾಯಿಸಲು ಹೇಳುವಾಗ....ಇದು ಕೆಟ್ಟ ಹಾಡು ಎಂದು ನಾವು ಅವರಿಗೆ ನೀಡುವ ವಿವರಣೆ....ಯಾವ ಕನ್ನಡ ಸಾಹಿತ್ಯಾಭಿಮನಿಗು..ಬೇಡ.
ಆಗ ನಮ್ಮ ಈ ಭಾಷೆ ನಮ್ಮ ಅಭಿಮಾನವೆಲ್ಲ ಅವರ ಮುಂದೆ ನಮ್ಮನ್ನು ಕುಬ್ಜವಾಗಿಸುತ್ತದೆ.....
ಸಿನಿಮ ಸಾಹಿತ್ಯ ಕೂಡ ಶ್ರೇಷ್ಠ ಉತ್ತಮ ವಾಗಬೇಕು....ಎಂಬ ಅಭಿಲಾಷೆಯೊಂದಿಗೆ.....ಎಲ್ಲರಿಗೂ....
ಕನ್ನಡ ರಾಜ್ಯೋತ್ಸವದ ಶುಭಾಶಯಗಳು.....
ಇಂಪಾಗು ಆಲಿಸುವ ಕಿವಿಗಳಿಗೆ,
ಕನ್ನಡವೆ ಕಂಪಾಗು ಉಲಿಯುವ ನಾಲಿಗೆಯಲಿ...
ಸೊಂಪಾಗು ನುಡಿಯುವ ಪ್ರತಿ ಬಾಯಲ್ಲಿಯು....
ನಿತ್ಯವು ಅರ್ಚಿತವಾಗು..ಆ ಭಗವಂತನಿಗೆ.....
ತಾಯಿ ಕನ್ನಡಾಂಬೆಗೆ......

No comments: